ಸಿಎಂ ಕುರ್ಚಿ ಕನಸಿಗೆ ಧಕ್ಕೆಯಾಗುವ ಆತಂಕದಲ್ಲಿ ಡಿಕೆ ಶಿವಕುಮಾರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೋಗಸ್‌ಗ್ರೇಟರ್‌ಬೆಂಗಳೂರು ಪಿತಾಮಹ ಡಿ.ಕೆ ಶಿವಕುಮಾರ್, ಮಳೆಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಮೊದಲು ಗಮನ ಹರಿಸಿ ಎಂದು ಜೆಡಿಎಸ್ ತಾಕೀತು ಮಾಡಿದೆ.

ಹೆಚ್ಚು ಮಾತನಾಡಿದರೆ, ಸಿಎಂ ಕುರ್ಚಿಯ ಕನಸಿಗೆ ಧಕ್ಕೆಯಾಗುವ ಆತಂಕದಲ್ಲಿರುವ ಡಿಕೆಶಿ, ಬೆಂಗಳೂರು ಅಭಿವೃದ್ಧಿಯನ್ನು ಮರೆತು ಮೌನವಹಿಸಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.

- Advertisement - 

ರಣಹೇಡಿಯಂತೆ ಹೈಕಮಾಂಡ್‌ಮುಂದೆ ಶಿರಸಾಷ್ಟಾಂಗ ಮಾಡುವುದಷ್ಟೆ ಸೀಮಿತವಾಗಿದೆ ಅವರ ಅಧಿಕಾರ. ಕರ್ನಾಟಕ ಕಾಂಗ್ರೆಸ್ ಆಡಳಿತದಲ್ಲಿ ಜನಸಾಮಾನ್ಯರು ಗುಂಡಿ ಬಿದ್ದ ರಸ್ತೆಗಳು, ಕಸದ ಸಮಸ್ಯೆ ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿಂದ ಬೆಂಗಳೂರು ನಗರದಲ್ಲಿ ನರಕ ಅನುಭವಿಸುತ್ತಿದ್ದಾರೆ ಎಂದು ಜೆಡಿಎಸ್ ಹರಿಹಾಯ್ದಿದೆ.

ಬೆಂಗಳೂರು ಅವ್ಯವಸ್ಥೆ ಸರಿಪಡಿಸಲು ನಿಮಗೆ  “ಸೂಪರ್‌ಸಿಎಂ ಸುರ್ಜೇವಾಲ “, ಇಟಲಿ ಕಾಂಗ್ರೆಸ್‌ʼನ ಸುಪ್ರೀಂ ರಾಹುಲ್ ಗಾಂಧಿ ನಿರ್ದೇಶನ ನೀಡಬೇಕೇ ? ಎಂದು ಜೆಡಿಎಸ್ ವ್ಯಂಗ್ಯವಾಡಿದೆ.

- Advertisement - 

 

 

 

 

Share This Article
error: Content is protected !!
";