ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಂದಿನಿ ಹಾಲು ಪರಿಶುದ್ಧವಾದ ಹಾಲು, ಸಂಜೆ ರೈತರಿಂದ ಸಂಗ್ರಹಿಸುವ ಹಾಲನ್ನು ಬೆಳಗ್ಗೆ ಗ್ರಾಹಕರಿಗೆ ಕೊಡುವ ವ್ಯವಸ್ಥೆಯನ್ನ ಹೊಂದಿದ್ದು, ಗ್ರಾಹಕರ ಆರೋಗ್ಯದ ದೃಷ್ಠಿಯಿಂದ ಗುಣಮಟ್ಟದ ಹಾಲನ್ನು ನೀಡುತ್ತಿರುವುದ್ದಾಗಿ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.
ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ಅಯೋಜನೆ ಮಾಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 3 ಜಿಲ್ಲೆಯ ನಾಯಕರು ಬಮೂಲ್ ಜವಾಬ್ದಾರಿಯನ್ನ ನನಗೆ ನೀಡಿದ್ದಾರೆ. ಬಮೂಲ್ ಅಧ್ಯಕ್ಷನಾದ ನಂತರ ಸುದೀರ್ಘವಾದ ಚಿಂತನೆ ಮಾಡಿದ ನಂತರ ರೈತರ ಎದುರಿಸುತ್ತಿರುವ ಸಮಸ್ಯೆ ಗೊತ್ತಾಗಿದೆ.
ಬಮೂಲ್ ಒಕ್ಕೂಟದಲ್ಲಿ ಪ್ರತಿದಿನ 17 ರಿಂದ 18 ಲಕ್ಷ ಹಾಲು ಸಂಗ್ರಹವಾಗುತ್ತದೆ. ಗುಣಮಟ್ಟದ ಹಾಲಿನ ನಿರ್ವಹಣೆ ಮಾಡುವುದು, ರೈತರಿಗೆ ಒಳ್ಳೆಯೇ ಬೆಲೆ ಕೊಡುವುದು ಮತ್ತು ಗ್ರಾಹಕರ ಹಿತವನ್ನ ಕಾಯುವ ಜವಾಬ್ದಾರಿ ನಮ್ಮ ಮೇಲಿದೆ. ಸಹಕಾರ ತತ್ವದೊಂದಿಗೆ ಇದನ್ನು ಕಾಪಾಡಿಕೊಂಡು ಹೋಗ ಬೇಕಿದೆ ಎಂದರು.
ನಂದಿನಿ ಹಾಲು ಪರಿಶುದ್ಧವಾದ ಹಾಲು, ಜನರ ಆರೋಗ್ಯದ ದೃಷ್ಠಿಯಿಂದ ಅವತ್ತಿನ ಹಾಲನ್ನ ಅವತ್ತೇ ಗ್ರಾಹಕರಿಗೆ ಕೊಡುವ ವ್ಯವಸ್ಥೆಯನ್ನ ಇಟ್ಟುಕೊಂಡಿದ್ದೇವೆ. ಸಂಜೆ ರೈತರಿಂದ ಸಂಗ್ರಹಿಸಿದ ಹಾಲನ್ನು ಬೆಳಗ್ಗೆ ಗ್ರಾಹಕರಿಗೆ ಕೊಡುವ ವ್ಯವಸ್ಥೆಯನ್ನ ನಾವು ಇಟ್ಟುಕೊಂಡಿದ್ದೇವೆ, ಇದರ ಜೊತೆಯಲ್ಲಿ ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಳ ಪೈಪೋಟಿ ಸಹ ಇದ್ದು, ಅವುಗಳ ಪೈಪೋಟಿ ನಡುವೆಯೂ ಗ್ರಾಹಕರ ಆರೋಗ್ಯದ ದೃಷ್ಠಿ ಇಟ್ಟುಕೊಂಡು ನಂದಿನಿ ಹಾಲನ್ನು ಸರಬರಾಜು ಮಾಡಲಾಗುತ್ತಿದೆ ಎಂದರು.
160ಕ್ಕೂ ಹೆಚ್ಚು ಹಾಲಿನ ಉತ್ಪನಗಳನ್ನ ಮಾರುಕಟ್ಟೆಯಲ್ಲಿವೆ, ಆದರೆ ಇದುವರೆಗೂ 160 ನಂದಿನಿ ಉತ್ಪನಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ಇಲ್ಲ, ಅದನ್ನ ಪ್ರಚಾರ ಮಾಡುವ ಮೂಲಕ ರೈತರ ಹಿತವನ್ನ ಕಾಯಬೇಕಿದೆ.
ನಂದಿನಿ ತುಪ್ಪವನ್ನ ತಿರುಪತಿ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಬಮೂಲ್ ಅಧ್ಯಕ್ಷನಾದ ಒಂದೂವರೆ ತಿಂಗಳ ಅವಧಿಯಲ್ಲಿ ಅಧಿಕಾರಿಗಳು, ಹೊಟೇಲ್ ಮಾಲೀಕರ ಸಂಘಗಳು ಮತ್ತು ಉದ್ಯಮಿಗಳ ಜೊತೆ ಮಾತನಾಡಿದ್ದಾಗ ಕಳಪೆ ಗುಣಮಟ್ಟದ ಪದಾರ್ಥಗಳನ್ನ ಹಾಲಿಗೆ ಬೇರೆಸುತ್ತಿರುವುದು ಕಂಡು ಬಂದಿದೆ.
ಗ್ರಾಹಕರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುವ ಪನ್ನಿರು ಖರೀದಿ ಮಾಡುತ್ತಾರೆ, ಇತರೆ ಕಂಪನಿಗಳ ಕಡಿಮೆ ಬೆಲೆಯ ಪನ್ನಿರು ಸೇವೆನೆ ಮಾಡಿದ್ದಾರೆ. ಆರೋಗ್ಯದ ಮೇಲೆ ಪರಿಣಾಮ ಬೀರುವುದು, ಚಿಕಿತ್ಸೆಗಾಗಿ ಮತ್ತಷ್ಟು ಹಣವನ್ನು ನೀವು ಖರ್ಚು ಮಾಡ ಬೇಕಾಗುತ್ತದೆ, ಎಲ್ಲರು ನಂದಿನಿ ಉತ್ಪನ್ನಗಳನ್ನೇ ಬಳಸುವಂತೆ ಇದೇ ವೇಳೆ ಅವರು ಮನವಿ ಮಾಡಿದರು.

