ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಒಂದೆಡೆ ಸಿದ್ದರಾಮಯ್ಯ ಬಣ, ಇನ್ನೊಂದೆಡೆ ಡಿಕೆಶಿ ಬಣದ ಮೂಲಕ ಕರ್ನಾಟಕ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ನಡೆಸುತ್ತಿದೆ. ಇದೀಗ ಪ್ರತಿಷ್ಠಿತ ಕೆಎಂಎಫ್ ಅಧ್ಯಕ್ಷಗಿರಿಗೂ ಎರಡು ಬಣದ ಪೈಪೋಟಿ ಆರಂಭವಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಶಾಸಕರನ್ನು ತನ್ನ ಅಂಕೆಯಲ್ಲಿಟ್ಟುಕೊಂಡು ಆಟವಾಡುತ್ತಿರುವ ಸಿದ್ದರಾಮಯ್ಯ ಅವರ ಹೊಸ ಆಟಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಬೆಸ್ತು ಬಿದ್ದಿದ್ದಾರೆ.
ವಲಸಿಗ ಸಿದ್ದರಾಮಯ್ಯ ಅವರಿಂದ ಡಿಕೆಶಿಯ ಸಿಎಂ ಕುರ್ಚಿ ಕನಸು ಕನಸಾಗಿಯೇ ಉಳಿದಿದೆ. ಇದೀಗ ತಮ್ಮ ಸಹೋದರ ಡಿ.ಕೆ ಸುರೇಶ್ ಅವರನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡುವ ಡಿಕೆಶಿ ಪ್ರಯತ್ನಕ್ಕೂ ಸಿದ್ದರಾಮಯ್ಯ ಅಡ್ಡಗಾಲು ಹಾಕಿದ್ದಾರೆ.
ಒಟ್ಟಿನಲ್ಲಿ ಸಿದ್ದು ಮತ್ತು ಡಿಕೆಶಿ ಕುರ್ಚಿ ಕಾಳಗದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಎಂಬುದೇ ಮರೀಚಿಕೆಯಾಗಿದೆ ಎಂದು ಬಿಜೆಪಿ ದೂರಿದೆ.

