ಡಿಕೆಶಿ ಮತ್ತು ಕೆ.ಎನ್​​ ರಾಜಣ್ಣ ಭೇಟಿ, ಸ್ಫೋಟಕ ಹೇಳಿಕೆ ನೀಡಿದ ರಾಜಣ್ಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಿಸಿಎಂ ಡಿಕೆ ಶಿವಕುಮಾರ್​ ಮತ್ತು ಮಾಜಿ ಸಚಿವ ಕೆ.ಎನ್​​ ರಾಜಣ್ಣ ಶನಿವಾರ ದಿಢೀರ್ ಭೇಟಿ ಮಾಡಿ ಚರ್ಚಿಸಿದ್ದು ರಾಜಕೀಯ ವಲಯದಲ್ಲಿ ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿತ್ತು.

ಇಬ್ಬರ ಭೇಟಿ ಸಾಕಷ್ಟು ಕುತೂಹಲಕ್ಕೂ ಕಾರಣವಾಗಿತ್ತು. ಆದರೆ ಭೇಟಿ ವಿಚಾರವಾಗಿ ಮಾಜಿ ಸಚಿವ ಕೆಎನ್ ರಾಜಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಭೇಟಿ ಮಾಡಿದ್ದರು.

- Advertisement - 

ಅವರು ಯಾರಿಗೆ ಬೇಕಾದರೂ ಭೇಟಿ ಮಾಡಬಹುದು, ಯಾರನ್ನಾದರೂ ಕರೆದು ಮಾತನಾಡಬಹುದು. ಪಕ್ಷದ ಹಿತದೃಷ್ಟಿಯಿಂದ ಏನೆಲ್ಲಾ ಮಾಡಬೇಕು ಅನಿಸುತ್ತೆ ಅವರು ಮಾಡುತ್ತಾರೆ. ಇದರಲ್ಲಿ ಯಾವುದೇ ಪ್ರಮುಖ ವಿಚಾರ ಇಲ್ಲ ಎಂದು ತಿಳಿಸಿದರು.

ಮುಂದುವರೆದು ಮಾತನಾಡಿದ ರಾಜಣ್ಣ, ನಾವು ಯಾವಾಗಲೂ ಸಿದ್ದರಾಮಯ್ಯ ಪರವಾಗಿ ಇದ್ದೇವೆ. ಡಿಕೆ ಶಿವಕುಮಾರ್ ಏನೇ ಪ್ರಯತ್ನ ‌ಮಾಡಿದರು ಕೂಡ ನನ್ನ ಹಿಂದಿನ ಎಲ್ಲ ಹೇಳಿಕೆಳಿಗೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸುವ ಮೂಲಕ ತಮ್ಮ ನಿಲುವು ಏನೆಂದು ಸ್ಪಷ್ಟಪಡಿಸಿದ್ದಾರೆ.

- Advertisement - 

 

 

 

 

Share This Article
error: Content is protected !!
";