ಹೆದರಿಸಿ, ಬೆದರಿಸಿ ಕಮಿಷನ್ ವಸೂಲಿ ಮಾಡಿ ಬಿಹಾರ ಚುನಾವಣೆಗೆ ಹೊರಟ ಡಿಕೆಶಿ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಹುಲ್ ಗಾಂಧಿ ಮನವೊಲಿಸಲು ಕರ್ನಾಟಕದ ತೆರಿಗೆ ಹಣವನ್ನು ಪರ್ಸೆಂಟೇಜ್ ಲೆಕ್ಕದಲ್ಲಿ ಲೂಟಿ ಹೊಡೆದು ಡಿಸಿಎಂ ಡಿ.ಕೆ ಶಿವಕುಮಾರ್ ಬಿಹಾರಕ್ಕೆ ಅಕ್ರಮವಾಗಿ ಹಣ ತಲುಪಿಸಿದ್ದಾರೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ಈಗ ಭಾರತೀಯ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಆಜ್ಞೆ ಮೇರೆಗೆ ಬಿಹಾರದಲ್ಲಿ ಕಾಂಗ್ರೆಸ್ ಪರವಾಗಿ ಮತಚಲಾಯಿಸಲು ಕರ್ನಾಟಕದಲ್ಲಿರುವ ವಲಸಿಗ ಬಿಹಾರಿಗಳಿಗೆ ವೇತನ ಸಹಿತ 3 ದಿನಗಳ ರಜೆ ಕೊಡಿಸುತ್ತಿದ್ದೀರಿ.
ರಾಜ್ಯದ ವಾಣಿಜ್ಯೋದ್ಯಮಿಗಳು, ಬಿಲ್ಡರ್‌ಗಳು ಮತ್ತು ಗುತ್ತಿಗೆದಾರರಿಂದ ಹೆದರಿಸಿ, ಬೆದರಿಸಿ ಕಮಿಷನ್ ವಸೂಲಿ ಮಾಡಿ ಬಿಹಾರ ಚುನಾವಣೆ ಎದುರಿಸಲು ಹೊರಟಿದ್ದೀರಿ.
ಡಿಕೆಶಿ ಅವರೇ ನೀವು ಕರ್ನಾಟಕದ ಜನರ ಪರವಾಗಿ ಕೆಲಸ ಮಾಡುತ್ತಿದ್ದೀರೋ, ಬಿಹಾರಕ್ಕೆ ಮಾಡುತ್ತಿದ್ದೀರೋ ? ಮೊದಲು ನಿಮಗೆ ಮತಹಾಕಿ ಗೆಲ್ಲಿಸಿದ ಕರ್ನಾಟಕದ ಜನರ ಸಂಕಷ್ಟಕ್ಕೆ ಸ್ಪಂದಿಸಿ, ಕನ್ನಡಿಗರನ್ನು ಉಳಿಸಿ ಎಂದು ಜೆಡಿಎಸ್ ತಾಕೀತು ಮಾಡಿದೆ.

