ಒಲೈಕೆ ರಾಜಕಾರಣಕ್ಕಾಗಿ ಹಿಂದೂಗಳ ಬಲಿಕೊಡಬೇಡಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು :  
ರಾಜ್ಯದಲ್ಲಿ ಸಿದ್ದರಾಮಯ್ಯ
ಅವರ ವಜೀರ್‌-ಇ-ಅಲ್ಲ ನಾ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರು ಹಿಂದೂಗಳನ್ನು ಟಾರ್ಗೆಟ್ ಮಾಡಿ ರಾಜಾರೋಷವಾಗಿ ಕೊಲೆ‌ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.

- Advertisement - 

ಕರಾವಳಿಯಲ್ಲಿ ಹಿಂದೂ ಕಾರ್ಯಕರ್ತನ ಕೊಲೆ ಮಾಡಲು ಮತಾಂಧರು ಹೊಂಚು ಹಾಕಿ ಕೂತಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅತಿಯಾದ ಓಲೈಕೆಯ ಕಾರಣದಿಂದಲೇ ಇಂದು ಮತಾಂಧರು ಈ ಪರಿ ಬಾಲ ಬಿಚ್ಚಲು ಸಾಧ್ಯ ಎಂದು ಬಿಜೆಪಿ ಕಿಡಿಕಾರಿದೆ.

- Advertisement - 

ಆಕಸ್ಮಿಕ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರೇ, ಮತ್ತೆ ಹಿಂದೂ ಕಾರ್ಯಕರ್ತರಿಗೆ ಧಮ್ಕಿ ಬಂದಿದೆ. ಕಟ್ಟೆಚ್ಚರವಹಿಸಿ ಕ್ರಮ ತೆಗೆದುಕೊಳ್ಳಿ ನಿಮ್ಮ ಒಲೈಕೆಗಾಗಿ ಮತ್ತೆ ಹಿಂದೂಗಳ ಬಲಿಕೊಡಬೇಡಿ ಎಂದು ಬಿಜೆಪಿ ಆಗ್ರಹ ಮಾಡಿದೆ.

 

- Advertisement - 

 

Share This Article
error: Content is protected !!
";