ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
“ಮಾನ್ಯ” ರಾಹುಲ್ ಗಾಂಧಿ ಅವರೇ, ಕ್ರೆಡಿಟ್‌ಗಾಗಿ ಹಪಾಹಪಿಸುವ ನಿಮ್ಮ ಪಕ್ಷದ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರು ಈಗ ನಿಮ್ಮನ್ನು ಭೇಟಿ ಮಾಡಲು ಬರುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಸರ್ಕಾರಿ ಪ್ರಾಯೋಜಿತ ಕಾಲ್ತುಳಿತದ ಕುರಿತು ನಾವು ಅವರಿಗೆ ಪ್ರಶ್ನೆಗಳನ್ನು ಕೇಳಿದ್ದೇವೆ ಆದರೆ ಅವರಲ್ಲಿ ಉತ್ತರವೇ ಇಲ್ಲ. ಅದಕ್ಕೆ ನೀವಾದರೂ ಉತ್ತರಿಸುತ್ತೀರಾ? ಎಂದು ಬಿಜೆಪಿ ಪ್ರಶ್ನಿಸಿದೆ.
- ಕರ್ನಾಟಕದಲ್ಲಿ 11 ಯುವಜನರ ಅಮೂಲ್ಯ ಜೀವವನ್ನು ಬಲಿತೆಗೆದುಕೊಂಡ, ನಿಮ್ಮ ಕಾಂಗ್ರೆಸ್ ಸರ್ಕಾರ ತಪ್ಪಿಸಬಹುದಾಗಿದ್ದ ಭೀಕರ ದುರಂತಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡುತ್ತೀರಿ?
- ವಿಧಾನಸೌಧದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸುವ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರದಲ್ಲಿ ಯಾರು ತೆಗೆದುಕೊಂಡರು?
- ಪೊಲೀಸ್ ಇಲಾಖೆ ಈ ಕಾರ್ಯಕ್ರಮಕ್ಕೆ ಅಧಿಕೃತ ಅನುಮತಿ ನಿರಾಕರಿಸಿದ್ದರೂ ಕೂಡ ಉನ್ನತ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದು ಏಕೆ? ಈ ಅವ್ಯವಸ್ಥೆಗೆ ನಿಜವಾಗಿ ಹೊಣೆಗಾರರಾದವರು ಯಾವ ಕ್ರಮವೂ ಎದುರಿಸದೇ ರಾಜಾರೋಷವಾಗಿ ಓಡಾಡಿಕೊಂಡಿರುವುದೇಕೆ?
- ಯಾವುದೇ ಸಮರ್ಪಕ ಸುರಕ್ಷತೆ, ಜನಸಂಚಾರ ನಿಯಂತ್ರಣ ಅಥವಾ ವೈದ್ಯಕೀಯ ವ್ಯವಸ್ಥೆಯ ಸಿದ್ಧತೆ ಇಲ್ಲದಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಲಕ್ಷಾಂತರ ಜನರನ್ನು ಸಾರ್ವಜನಿಕವಾಗಿ ಆಹ್ವಾನಿಸಲು ಮುಂದಾಗಿದ್ದೇಕೆ?
- ಕೊನೆಯದಾಗಿ, 11 ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡ ನಂತರವೂ, ನಿಮ್ಮ ನಾಯಕರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೂ ಸೇರಿ ಹೋಟೆಲಿಗೆ ಹೋಗಿ ಮಸಾಲೆದೋಸೆ, ಬಾದಾಮ್ ಹಲ್ವಾ ತಿನ್ನಲು ಹೇಗೆ ಮನಸ್ಸು ಬಂತು?
ನಾವು ನಿಮ್ಮಿಂದ ಉತ್ತರವನ್ನು ನಿರೀಕ್ಷಿಸಬಹುದೇ ಅಥವಾ ನೀವು ಪ್ರತಿ ಬಾರಿಯಂತೆ ಈ ಬಾರಿ ಕೂಡ ಜವಾಬ್ದಾರಿಯಿಂದ ನುಣುಚಿಕೊಂಡು ಓಡಿಹೋಗುತ್ತೀರಾ? ಹೆದರಬೇಡಿ ಉತ್ತರಿಸಿ ಎಂದು ಬಿಜೆಪಿ ತಾಕೀತು ಮಾಡಿದೆ.