ವಿಷ್ಣುವರ್ಧನ್‌ ಸಮಾಧಿ ತೆರವಿಗೆ ಕಾರಣ ಏನು ಗೊತ್ತಾ?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯ ನಟ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವನ್ನು ಅಭಿಮಾನ್ ಸ್ಟುಡಿಯೋದಿಂದ ರಾಜ್ಯ ಹೈಕೋರ್ಟ್‌ ಆದೇಶದಂತೆ ತೆರವುಗೊಳಿಸಲಾಗಿದೆ ಎಂದು ವಕೀಲ ಕಾರ್ತಿಕ್‌ ವಿ. ಸ್ಪಷ್ಟಪಡಿಸಿದ್ದಾರೆ.

 ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ವರ್ಷದ ಜನವರಿ 13 ರಂದು ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿ ಆರ್.‌ ದೇವದಾಸ್‌ ಅವರ ಏಕ ಸದಸ್ಯ ಪೀಠ ಸಮಾಧಿ ಸ್ಥಳವನ್ನು ತೆರುವುಗೊಳಿಸುವಂತೆ ಆದೇಶ ನೀಡಿತ್ತು. ಆದ್ಯತೆಯ ಮೇರೆಗೆ ಸಮಾಧಿ ತೆರವುಗೊಳಿಸುವಂತೆ ಪ್ರತಿವಾದಿಗಳಾದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಬೆಂಗಳೂರು ನಗರದ ವಿಶೇಷ ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು ಎಂದಿದ್ದಾರೆ.

- Advertisement - 

ಬಾಲಕೃಷ್ಣ ಅವರ ಮೊಮ್ಮಗ ಬಿ.ಎಸ್.‌ ಕಾರ್ತಿಕ್ ಕಾನೂನು ಹೋರಾಟ  ನಡೆಸಿದ್ದರು. ನ್ಯಾಯಾಲಯದ ಆದೇಶದಂತೆ ಎರಡು ತಿಂಗಳ ನಂತರವೂ ಸಮಾಧಿ ಸ್ಥಳ ತೆರವುಗೊಳಿಸಿರಲಿಲ್ಲ. ಆದರೆ ಕಳೆದ 2020 ರ ಜನವರಿ 10 ರಂದು ಡಾ. ವಿಷ್ಣುವರ್ಧನ್‌ ಅವರ ಸಮಾಧಿ ಸ್ಥಳ ಮೈಸೂರಿಗೆ ಸ್ಥಳಾಂತರಿಸುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲು ಸರ್ಕಾರ 2.5 ಎಕರೆ ಭೂಮಿ ಸಹ ಸರ್ಕಾರ ಮಂಜೂರು ಮಾಡಿತ್ತು ಎಂದು ಅವರು ಹೇಳಿದ್ದಾರೆ.

ಆದೇಶ ನೀಡಿದ ಎರಡು ತಿಂಗಳಲ್ಲಿ ಸಮಾಧಿ ಸ್ಥಳ ತೆರವು ಮಾಡದ ಕಾರಣ ನ್ಯಾಯಾಲಯದ ಆದೇಶದಂತೆ ಪೊಲೀಸರ ಸಮ್ಮುಖದಲ್ಲಿ ಸಮಾಧಿ ಸ್ಥಳ ತೆರವು ಮಾಡಲಾಗಿದೆ ಎಂದು ವಕೀಲ ಕಾರ್ತಿಕ್‌ ವಿ ತಿಳಿಸಿದ್ದಾರೆ.

- Advertisement - 

Share This Article
error: Content is protected !!
";