ಚಂದ್ರಪ್ರಕಾಶ್ ರವರಿಗೆ ಡಾಕ್ಟರೇಟ್ ಪದವಿ ಪ್ರದಾನ…

News Desk

ಚಂದ್ರವಳ್ಳಿ ನ್ಯೂಸ್, ಹಂಪಿ:
ಡಾ. ತಿಮ್ಮಪ್ಪ. ಎ. ಕೆ. ಇವರ ಮಾರ್ಗದರ್ಶನದಲ್ಲಿ” ಆಧುನಿಕ ಪೂರ್ವ ಕನ್ನಡ ಸಾಹಿತ್ಯದಲ್ಲಿ ಶಾಪ ಪ್ರಸಂಗಗಳ ಸ್ವರೂಪ ಮತ್ತು ವಿಶ್ಲೇಷಣೆ” ಎನ್ನುವ ವಿಷಯದ ಮೇಲೆ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಸಂಶೋಧನೆ ಕೈಗೊಂಡು ಮಂಡಿಸಿದ ಪಿಎಚ್ಡಿ ಮಹಾ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ…

ಕರ್ನಾಟಕದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕು ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಮೊಳಕಾಲ್ಮುರು ತಾಲೂಕಿನಲ್ಲಿ ಬಡತನ. ನಿರುದ್ಯೋಗ ದಿಂದ ಕೂಡಿದ ಹಿಂದುಳಿದ ವರ್ಗಗಳ ಕುಟುಂಬಗಳೇ ಹೆಚ್ಚಾಗಿ ವಾಸವಿರುವುದನ್ನ ಕಾಣಬಹುದಾಗಿದೆ.. ಆರ್ಥಿಕತೆಯಲ್ಲಿ ತಾಲೂಕು ಹಿಂದುಳಿದಿರಬಹುದು ಆದರೆ ಉನ್ನತ ಶಿಕ್ಷಣ ಪಡೆಯುವ ಪ್ರತಿಭೆಗಳಿಗೇನು ಬರಲಿಲ್ಲ. “ಕಷ್ಟಗಳು ನೂರಿರಲಿ ಸತತ ಕಠಿಣ ಪರಿಶ್ರಮ ಪಟ್ಟರೆ ಎಂತಹ ಸಾಧನೆ ಬೇಕಾದರೂ ಸಿದ್ದಿಸಿಕೊಳ್ಳಬಹುದು” ಎಂಬುದನ್ನು ಚಂದ್ರಪ್ರಕಾಶ್ ರವರು ಈ ಬಾರಿ ಹಂಪಿ ವಿಶ್ವವಿದ್ಯಾನಿಲಯ ದಿಂದ ಡಾಕ್ಟರೇಟ್ ಪದವಿ ಪಡೆದಿರುವುದು ನಿದರ್ಶನವಾಗಿದೆ.

ಚಂದ್ರಪ್ರಕಾಶ್ ರವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ದೇವಸಮುದ್ರ ಹೋಬಳಿಯ ವೆಂಕಟಪುರ ಎನ್ನುವ ಕುಗ್ರಾಮದವರು. ಇವರು ಪರಿಶಿಷ್ಟ ವರ್ಗಕ್ಕೆ ಸೇರಿದ ಬಡ ಕುಟುಂಬದ ಮಾರಪ್ಪ ಹಾಗೂ ಗಂಗಮ್ಮ ಎನ್ನುವ ದಂಪತಿಗಳ ಪುತ್ರ. ಇವರು ಪ್ರಾಥಮಿಕ ಶಿಕ್ಷಣವನ್ನು ವೆಂಕಟಾಪುರ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಮೊಳಕಾಲ್ಮುರು ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್. ಡಿ ಎಡ್ ಶಿಕ್ಷಕರ ತರಬೇತಿಯನ್ನು ಕೊಂಡ್ಲಹಳ್ಳಿ ರೇವಣಸಿದ್ದೇಶ್ವರ ಶಿಕ್ಷಕ ತರಬೇತಿ ಕಾಲೇಜ್.. ಬಿ.ಎ. ಪದವಿಯನ್ನು ಚಿತ್ರದುರ್ಗದ ಕಲಾ ಕಾಲೇಜ್.. M.A. ಸ್ನಾತಕೋತ್ತರ ಪದವಿಯನ್ನು ಶಿವಮೊಗ್ಗದ ಶಂಕರಘಟ್ಟ ವಿಶ್ವವಿದ್ಯಾನಿಲಯದಲ್ಲಿ ಅತ್ಯಂತ ಉನ್ನತ ಶ್ರೇಣಿಯಲ್ಲಿ ಪಡೆದರು..

ಇವರಿಗೆ ಮುಂದಿನ ವಿದ್ಯಾಭ್ಯಾಸ ಮಾಡುವ ಹಂಬಲವಿದ್ದರೂ …ಕುಟುಂಬದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಅನುಕೂಲವಾಗಿರಲಿಲ್ಲ. ಆದರೂ ಉನ್ನತ ಶಿಕ್ಷಣ ಮುಂದುವರಿಸುವ ಉದ್ದೇಶದಿಂದ ಚಳ್ಳಕೆರೆಯ ಶ್ರೀಮತಿ ಕೋಟೆ ಬೋರಮ್ಮ ಪದವಿ ಕಾಲೇಜು. ಶ್ರೀ ಜೋಗೇಶ್ವರ ಪದವಿ ಪೂರ್ವ ಕಾಲೇಜ್ ಹಾಗೂ ಕೊಂಡ್ಲಹಳ್ಳಿ ಶ್ರೀ ಸರ್ವೋದಯ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಂತಹ ಹಣದಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ M.ED. ಪದವಿ ಹಾಗೂ ಮೈಸೂರಿನ ಮಾನಸಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ M.A ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯನ್ನು ಅತ್ಯಂತ ಉನ್ನತ ಶ್ರೇಣಿಯಲ್ಲಿ ಪಡೆದರು. ಇಷ್ಟೊತ್ತಿಗೆ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕುಟುಂಬದ ಜವಾಬ್ದಾರಿಗಳ ಮಧ್ಯೆಯು ಉನ್ನತ ಶಿಕ್ಷಣದ ಬಗೆಗಿನ ಉತ್ಸಾಹ ಕಡಿಮೆ ಆಗದೆ… 2018- 19 ನೇ ಸಾಲಿನಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳೊಂದಿಗೆ ಪಿಎಚ್ .ಡಿ. ಪದವಿ ಪ್ರವೇಶ  ಪಡೆದರು…

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ. ತಿಮ್ಮಪ್ಪ. ಎ .ಕೆ. ಅವರ ಮಾರ್ಗದರ್ಶನದಲ್ಲಿ ಆಧುನಿಕ ಪೂರ್ವ ಕನ್ನಡ ಸಾಹಿತ್ಯದಲ್ಲಿ ಶಾಪ ಪ್ರಸಂಗಗಳ ಸ್ವರೂಪ ಮತ್ತು ವಿಶ್ಲೇಷಣೆ “ಎನ್ನುವ ವಿಷಯದ ಮೇಲೆ ಸಂಶೋಧನೆ ಕೈಗೊಂಡರು. ಈ ಸಂಶೋಧನೆಯಲ್ಲಿ 10ನೇ ಶತಮಾನದಿಂದ ಹಿಡಿದು 19ನೇ ಶತಮಾನದವರೆಗಿನ ಕನ್ನಡ ಸಾಹಿತ್ಯದ ಮಹಾನ್ ಕೃತಿಗಳಾದ ರಾಮಾಯಣ .ಮಹಾಭಾರತ .ಭಾಗವತ . ಹರಿಹರನ ರಗಳೆ . ರಾಘವಾಂಕನ ಹರಿಚಂದ್ರ ಕಾವ್ಯ ಸೇರಿದಂತೆ ..ಆದಿ ಕವಿ ಪಂಪನಿಂದ ಹಿಡಿದು ಕುವೆಂಪುರವರವರೆಗೂ ಸುಮಾರು 900 ವರ್ಷಗಳ ಕನ್ನಡ ಸಾಹಿತ್ಯದ ಸುಧೀರ್ಘ ಸಂಶೋಧನೆ ನಡೆಯಿತು. ಈ ಸಂಶೋಧನೆಯ ಹಾದಿಯಲ್ಲಿ ಕುಟುಂಬದ ನಿರ್ವಹಣೆ ತ್ರಾಸದಾಯಕವಾಗಿದ್ದರು.. ಅತ್ಯಂತ ಹುನ್ನತ ಅಂಕಗಳೊಂದಿಗೆ ಪಡೆದ “ರಾಷ್ಟ್ರೀಯ  ಶಿಷ್ಯವೇತನ ಹೆಂಡತಿ ಮಕ್ಕಳ ಹಾಗೂ ಇವರ ವಿದ್ಯಾಭ್ಯಾಸಕ್ಕೆ ನೆರವಾಯಿತು.

ಇವರ ಸತತ ಪ್ರಯತ್ನ ಹಾಗೂ ಕಠಿಣ ಪರಿಶ್ರಮ ಪರಿಶ್ರಮಕ್ಕೆ ಪ್ರತಿಫಲವಾಗಿ ಕನ್ನಡ ವಿಶ್ವವಿದ್ಯಾಲಯವು ಇವರು ಸಲ್ಲಿಸಿದ ಸಂಶೋಧನೆಯ ಮಹಾ ಪ್ರಬಂಧಕ್ಕೆ  ಈ ಬಾರಿ ಡಾಕ್ಟರೇಟ್ ಪದವಿಯನ್ನು ಶ್ರೇಷ್ಠ ದರ್ಜೆಯಲ್ಲಿ ನೀಡಿ ಗೌರವಿಸಿದೆ.

ಇವರ ಸಂಶೋಧನೆಯ ಹಾದಿಯಲ್ಲಿ ಹಲವಾರು ಸಾಹಿತ್ತಿಕ ಹಾಗೂ ಐತಿಹಾಸಿಕ ಕೃತಿಗಳನ್ನು ರಚಿಸಿರುವುದು ಕಾಣಬಹುದಾಗಿದೆ..

ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ “ಸಾರಾ ಅಬೂಬಕರ್ ಅವರ ಚಂದ್ರಗಿರಿ ತೀರದಲ್ಲಿ ಹಾಗೂ ಸಹನಾ ಕಾದಂಬರಿ ಗಳಲ್ಲಿ ಸ್ತ್ರೀವಾದಿ ನೆಲೆಗಳು”ಕಿರು ಪ್ರಬಂಧ.

ರಾಜ್ಯಮಟ್ಟದ ಐ.ಎಸ್.ಎಸ್.ಎನ್ ಪತ್ರಿಕೆಯಲ್ಲಿ ಪ್ರಕಟವಾದ” ಹರಿಹರನ ಬಸವ ದೇವರ ರಗಳೆ ಶಾಪ ಪ್ರಸಂಗ ಹಾಗೂ ಶಾಪಗಳ ಹಿನ್ನೆಲೆ ಮತ್ತು ಸ್ವರೂಪ “ಎನ್ನುವ ಸಂಶೋಧನಾ ಲೇಖನಗಳು ಸಂಶೋಧನಾ ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಗಿವೆ…

ಇದರ ಜೊತೆಗೆ “ಸೌಕರ್ಯಗಳಿಲ್ಲದೆ ಸೊರಗಿ ಹೋದ ಮೊಳಕಾಲ್ಮುರಿನ ಮೌರ್ಯ ಸಾಮ್ರಾಜ್ಯ”. “ಮೊಳಕಾಲ್ಮೂರು ತಾಲೂಕಿನ ಗತವೈಭವ”..” ಮೊಳಕಾಲ್ಮುರಿನ ಸಾಹಿತ್ಯ ಪರಂಪರೆ “..”ತವರು ಜಿಲ್ಲೆಯಲ್ಲಿ ಎನ್ ವೈ ಕುಟುಂಬ”.. ಕೃತಿಗಳು ಬರವಣಿಗೆಯ ಹಾದಿಯಲ್ಲಿವೆ..

ಇದರ ಜೊತೆಗೆ ಇವರು ಮಾಧ್ಯಮ ಲೋಕದಲ್ಲಿ ರಾಜಕೀಯ. ಸಾಮಾಜಿಕ. ಸಾಂಸ್ಕೃತಿಕ. ಐತಿಹಾಸಿಕ ಮುಂತಾದ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಭಿನ್ನ ವರದಿಗಾರಿಕೆಯ ಮೂಲಕ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ನಿರ್ವಹಿಸುತ್ತಿದ್ದಾರೆ..

 ಅಲ್ಲದೆ ರಾಜ್ಯಮಟ್ಟದ ಎನ್ಎಸ್ಎಸ್ ಶಿಬಿರಿಗಳಲ್ಲಿ..ಹೆಗ್ಗೋಡು ನೀನಾಸಂ ರಾಷ್ಟ್ರೀಯ ವಿಚಾರಣಾ ಸಂಕೀರ್ಣಗಳಲ್ಲಿ ಭಾಗವಹಿಸಿ.. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಯು. ಆರ್. ಅನಂತಮೂರ್ತಿ ಹಾಗೂ ಕೆ ವಿ ಅಕ್ಷರ. ಗೋವಿಂದರಾಜು. ಆಶಿಶ್ ನಂದಿ. ಅಚ್ಚುತ ರಂತಹ  ಚಲನಚಿತ್ರ ನಟ ಹಾಗೂ ಸಾಹಿತಿಗಳ ಜೊತೆ ತರಬೇತಿ ಹಾಗೂ ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾಹಿತ್ಯ ಕ್ಷೇತ್ರದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ….

ಇಂತಹ ಮೇರು ವ್ಯಕ್ತಿತ್ವದ ಚಂದ್ರಪ್ರಕಾಶ್ ರವರಿಗೆ ಕನ್ನಡ ವಿಶ್ವವಿದ್ಯಾನಿಲಯ ಡಾಕ್ಟರೇಟ್ ನೀಡಿ ಗೌರವಿಸಿರುವುದು ಪ್ರಶಂಸನೀಯವಾಗಿದೆ. ಅಲ್ಲದೆ ಇವರ ಈ ಸಾಧನೆಗೆ ಕನ್ನಡ ಸಾಹಿತ್ಯ ವಿಭಾಗದ ಮುಖ್ಯಸ್ಥರು ಮಾರ್ಗದರ್ಶಕರು. ಉಪನ್ಯಾಸವರ್ಗ. ಶಿಕ್ಷಕ ವರ್ಗ.. ಕುಟುಂಬ .ಸ್ನೇಹಿತ .ಶಿಷ್ಯವರ್ಗ ಹಾಗೂ ಪತ್ರಿಕ ಹಾಗೂ ಮಾಧ್ಯಮ ಸಹೋದ್ಯೋಗಿಗಳು  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

 

 

Share This Article
error: Content is protected !!
";