ಸಮುದ್ರದಹಳ್ಳಿ ಪೂಜಿತ ರಂಗನಾಥ್ ಗೆ ಡಾಕ್ಟರೇಟ್ ಪದವಿ ಪ್ರದಾನ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಸಮುದ್ರದಹಳ್ಳಿ ಗ್ರಾಮದ ನಿವೃತ್ತ ಪ್ರಾಂಶುಪಾಲ ರಂಗನಾಥ್ ಎಸ್ ಎಚ್ ಇವರ ಪುತ್ರಿ ಕುಮಾರಿ ಪೂಜಿತ ಎಸ್ ಆರ್ ಇವರು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (IARI), ನವದೆಹಲಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ, ಪ್ರತಿಷ್ಠಿತ ಸಂಸ್ಥೆ ICAR-ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ICAR-IIHR), ಬೆಂಗಳೂರು ಇಲ್ಲಿ ತಮ್ಮ ಸಂಶೋಧನೆ ನಡೆಸಿದ್ದಾರೆ.
ಹಿರಿಯ ವಿಜ್ಞಾನಿ ಡಾ.ಟಿ.ಉಷಾ ಭಾರತಿ ಅವರ ಮಾರ್ಗದರ್ಶನದಲ್ಲಿ ಸುಗಂದರಾಜ ಹೂವಿನ ಗಿಡದ ಎಲೆ ಚುಕ್ಕಿ ರೋಗ ನಿರೋಧಕ ಶಕ್ತಿಯ ಕುರಿತಾದ ಅಧ್ಯಯನಕ್ಕೆ Phd (ಡಾಕ್ಟರೇಟ್) ಪದವಿ ಪಡೆದಿದ್ದಾರೆ.
ಇವರು “ಟ್ಯೂಬರೋಸ್ ಜಾತಿಗಳನ್ನು ಮತ್ತು ಅವುಗಳ ಎಲೆ ಬ್ಲೈಟ್ ರೋಗ (ಅಲ್ಟರ್ನೇರಿಯಾ ಪೋಲಿಯಾಂತಿ) ಪ್ರತಿರೋಧ ಸಾಮರ್ಥ್ಯವನ್ನು ಮೌಲ್ಯಮಾಪನ” ಕುರಿತಾಗಿ ಸಂಶೋಧನೆ ನಡೆಸಿ ಮಹತ್ವದ ಮಹಾ ಪ್ರಬಂಧ ಮಂಡಿಸಿದ್ದರು.
ಶಿರಾ ನಗರದ ಶ್ರೀ ರಂಗನಾಥ ಪದವಿ ಪೂರ್ವ ಕಾಲೇಜಿನಲ್ಲಿ 2014ರಲ್ಲಿ ಪಿಯುಸಿ ಅಧ್ಯಯನ ಮಾಡಿದ್ದ ಪೂಜಿತ ಅವರು ಶಿರಾ ಮತ್ತು ಚಿತ್ರದುರ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆಂದು ಬಿಬಿಎಂಪಿ ಡೆಪ್ಯೂಟಿ ಕಮಿಷನರ್ ಹಾಗೂ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಜೆ.ರಾಜು ಬೇತೂರು ಪಾಳ್ಯ ಅವರು ಸಾಧನೆ ಮಾಡಿರುವ ಪೂಜಿತ ಅವರಿಗೆ ಅಭಿನಂದಿಸಿದ್ದಾರೆ.