ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಷ್ಠ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರುಗಳಿಗೆ
  ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ  ಸನ್ಮಾನಿಸಲಾಯಿತು.

ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಿರೀಶ್ ಮತ್ತು ಮಹಿಳಾ ವೈದ್ಯೆ ಡಾಕ್ಟರ್ ಅರ್ಚನಾ ರವರನ್ನು ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು.

- Advertisement - 

ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಿರೀಶ್ ಮಾತನಾಡಿ ಬಿಧಾನ್ ಚಂದ್ರ ರಾಯ್ ರವರ ಸ್ಮರಣಾರ್ಥವಾಗಿ ಪ್ರತಿವರ್ಷ ಜುಲೈ 1 ರಂದು ವೈದ್ಯರ ದಿನಾಚರಣೆ ಯಾಗಿ ಆಚರಣೆ ಮಾಡಲಾಗುತ್ತಿದ್ದು  ನಮ್ಮ ಸೇವೆ ನಿರಂತರವಾಗಿದ್ದು ಅದಷ್ಟು ಬಡ ರೋಗಿಗಳಿಗೆ ಆತ್ಮ ಪೂರಕವಾಗಿ ಸೇವೆ ಮಾಡಲಾಗುವುದು ಹಾಗು ಎಲ್ಲರು ಉತ್ತಮ ಅರೋಗ್ಯವಂತರಾಗಿ ಉತ್ತಮ ಜೀವನವನ್ನು ನಡೆಸಿ ಎಂದರು.

ನಂತರ ಮಾತನಾಡಿದ ಮಹಿಳಾ ವೈದ್ಯೆ ಡಾಕ್ಟರ್ ಅರ್ಚನಾ ಮಾತನಾಡಿ ಎಲ್ಲರು ಒತ್ತಡದಿಂದ  ಬದುಕುತ್ತಿದ್ದಾರೆ ಅದರೆ  ಒತ್ತಡ ಜೀವನ ಶೈಲಿಯನ್ನ ಅದಷ್ಠು ಕಡಿಮೆ ಮಾಡಿಕೊಂಡು ನೆಮ್ಮದಿ ಜೀವನ ನಡೆಸಿ ಹಾಗು ಎಲ್ಲರು ಯೋಗ ಮಾಡುವುದರಿಂದ ಅರೋಗ್ಯ ಉತ್ತಮ ಸ್ಥಿತಿಯಲ್ಲಿರುತ್ತದೆ ಹಾಗು ಮೋಬೈಲ್ ಬಳಕೆ ಅದಷ್ಟು ಕಡಿಮೆ ಮಾಡಿ ಸ್ತ್ರಿ ಯರು ಪ್ರಗ್ನೆಟ್ ಅದ ತಕ್ಷಣ ಯಾವುದೆ ಕೆಲಸ ಮಾಡಲು ಅಗುವುದಿಲ್ಲ ಎಂದು ಸುಮ್ಮನೆ ಕುರುವುದು ಬೇಡ ಯೋಗ  ಕೆಲಸ ಕಾರ್ಯಗಳಲ್ಲಿ ತೂಡಗಿದರೆ ಅರೋಗ್ಯ ಸುದಾರಣೆಯಾಗುತ್ತೆ ಎಂದರು

- Advertisement - 

ಈ ಸಂದರ್ಭದಲ್ಲಿ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಶಾಂತಿನಗರ ಪ್ರವೀಣ್ ಕುಮಾರ್ ತಾಲ್ಲೂಕು ಅಧ್ಯಕ್ಷ ಹರೀಶ್ ಕಾರ್ಯದರ್ಶಿ ಮಂಜುನಾಥ, ಕುಮುದಾ ಹಾಗು ತಾಲ್ಲೂಕು ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಅಸ್ಪತ್ರೆಯ ಸಿಬ್ಬಂದಿ ಇದ್ದರು.

 

Share This Article
error: Content is protected !!
";