ಚಂದ್ರವಳ್ಳಿ ನ್ಯೂಸ್, ಮೈಸೂರು:
ಸಿನೆಮಾ ನಾಯಕ ನಟ ಡಾಲಿ ಧನಂಜಯ್ ಮತ್ತು ಕೋಟೆನಾಡಿನ ವೈದ್ಯೆ ಡಾ.ಧನ್ಯತಾ ಮದುವೆ ಸಮಾರಂಭ ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಭಾನುವಾರ ಅದ್ಧೂರಿಯಾಗಿ ನಡೆಯಿತು.
ಚಿತ್ರರಂಗದ ಹಲವು ನಟ, ನಟಿಯವರು, ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ಅಭಿಮಾನಿಗಳು ಆಗಮಿಸಿ ನವದಂಪತಿಗೆ ಶುಭ ಹಾರೈಸಿದರು.
ಸೆಲೆಬ್ರಿಟಿಗಳು: ಹ್ಯಾಟ್ರಿಕ್‌ಹೀರೋ ಶಿವರಾಜ್ ಕುಮಾರ್, ನಟ, ಸಾಧು ಕೋಕಿಲ, ಹಿರಿಯ ನಿರ್ದೇಶಕ ನಾಗಭರಣ, ಹಿರಿಯ ಕಲಾವಿದ ಮಂಡ್ಯ ರಮೇಶ್, ನಟ ಲೂಸ್‌ಮಾದ, ನಟಿ ಸೋನು ಗೌಡ ಮತ್ತು ಸಿದ್ಲಿಂಗು ಪಾರ್ಟ್-2ಚಿತ್ರತಂಡ, ತರುಣ್‌ಸೋನಾಲ್, ಜೆಡಿಎಸ್‌ಶಾಸಕ ಜಿ. ಟಿ. ದೇವೇಗೌಡ, ಅರಸೀಕೆರೆ ಶಾಸಕ ಶಿವಲಿಂಗೇ ಗೌಡ, ಶಾಸಕಿ ನಯನ ಮೋಟಮ್ಮ, ಸಚಿವ ಸತೀಶ್‌ಜಾರಕಿಹೊಳಿ ಹಾಗೂ ಗಣ್ಯರು ಮತ್ತು ಅಭಿಮಾನಿಗಳು ಆಗಮಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಡಾಲಿ ಧನಂಜಯ್ ಮತ್ತು ಧನ್ಯತಾ ಜೋಡಿಗೆ ಶುಭಾಶಯ ಕೋರಿದರು.
ಡಾಲಿ ಧನಂಜಯ್‌ಅವರ ಹುಟ್ಟೂರು ಅರಸೀಕೆರೆಯ ಕಾಳೇಹಳ್ಳಿಯಾದರೂ ವಿದ್ಯಾಭ್ಯಾಸ, ನಾಟಕ ಅಭ್ಯಾಸ, ಸಿನಿಮಾ ಜೀವನ ಪ್ರಾರಂಭವಾಗಿದ್ದು ಮೈಸೂರಿನಲ್ಲೇ.

ಈಗ ಅವರು ತಮ್ಮ ದಾಂಪತ್ಯ ಜೀವನವನ್ನು ಮೈಸೂರಿನಿಂದಲೇ ಶುರು ಮಾಡಿರುವುದು ವಿಶೇಷ. ಧನಂಜಯ್ ಮಾರ್ಚ್‌ನಿಂದಲೇ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

