ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಧರೆಗೆ ಬಾ…ರಾಮ
ನಾಚಿಕೊಳ್ಳಬೇಡ
ಎದ್ದೊಡನೆ
ಎಡಗೈಯಲ್ಲಿ
ಆಂಡ್ರಾಯ್ಡ್ ಫೋನು
ಕಣ್ಣುಜ್ಜುತ್ತ ಬಲಗೈಯಲ್ಲಿ
ಸ್ವೈಪು
ಹಾಗೇ ಒಂದು ಯೂಟ್ಯೂಬ್ ನ
ಝಲಕು
ಇನ್ನೆಲ್ಲಿಯ ರಾಮ
ಹದಿನೆಂಟರ ಪಡ್ಡೆ
ಹುಡುಗ ಹರಿದ ಲೇಟೆಸ್ಟ್
ತ್ರಿ ಫೋರ್ಥ್ ಬರ್ಮುಡಾ ಧರಿಸಿ, ಕೊರಳ ಕೊಂಕಿಸಿ
ರೋಡ್ ಮೇಲೆ ಸ್ಟಂಟ್ಸ್
ಮಾಡುತ್ತ ,ತಂಪು ಮುಂಜನೆಯ ತಂಗಾಳಿಗೆ
ಕಾರ್ಬನ್ ಹಂಚುವಾಗ
ಇನ್ನೆಲ್ಲಿಯ ರಾಮ
ಮೈ ಮುರಿದು ದುಡಿವ
ತಲೆ ಹುರಿದು ,
ಕಂಪ್ಯೂಟರ್ ನ ಬುಡ ಜಾಲಾಡಿ
ಮಾಡಿಟ್ಟ
ಮೂರು ದಿನ ಫ್ರಿಜ್ ಲ್ಲಿಟ್ಟ
ತಂಗಳು ಸಾಂಬಾರ್
ಬಿಸಿಮಾಡಿ ಉಣ್ಣುವ
ಸೂಪರ್ ಭೋಜನಕ್ಕೆ
ಸಾಕ್ಷಿಯಾಗುವ ಯುವ
ದಂಪತಿಗಳಿರುವಾಗ
ಇನ್ನೆಲ್ಲಿಯ ರಾಮ
ಮೂವತ್ತಾದರು ಮದುವೆ
ಗೋಜಿಗೆ ಹೋಗದ ಮಗಳು, ಅವಳೊಪ್ಪಿದರೆ
ಆಯ್ತು ನಮ್ಮದೇನಿಲ್ಲ
ಹಳೇ ಫರ್ನಿಚರ್ಗಳು
ಇರಬಾರದು ಅಷ್ಟೇ
ಎಂದು ಮುದ್ದುಮಾಡುವ
ಮಾತ ಪಿತೃರಿರುವಾಗ
ಇನ್ನೆಲ್ಲಿಯ ರಾಮ
ನಾವೇ ಸಾಕಿ ಸಲಹಿದ
ಮುದ್ದು ಮಕ್ಕಳು ಇರುವರು ಹೊರದೇಶದಲಿ
ಬಂದರೆ ಬರುವರು
ವರುಷಕ್ಕೊಮ್ಮೆ
ಬದುತಿಹೆವು ನಾವಿಲ್ಲಿ
ಸಾವಿಗಂಜಿ ಬಾಳುತಿರಲು
ಇನ್ನೆಲ್ಲಿಯ ರಾಮ
ಹೆದರದೆ ಧರೆಗಿಳಿದು
ಬಾ….ರಾಮ ನಾಚಿಕೊಳ್ಳಬೇಡ
ನೊಂದ ಹಾಸ್ಯ
ರಚನೆ: ಗುರಾನಿ
ಜಿ ಆರ್ ನಿಂಗೋಜಿ ರಾವ್
ದಾವಣಗೆರೆ 9036389240