ಮದ್ಯ ವ್ಯಸನಕ್ಕೆ ಬಲಿಯಾಗಿ ಜೀವನ ಹಾಳುಮಾಡಿಕೊಳ್ಳಬೇಡಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿಯ ತಪಸಿಹಳ್ಳಿ ಗ್ರಾಮದಲ್ಲಿನ ಪುಷ್ಪಾಂಡಜ ಮಹರ್ಷಿ ಆಶ್ರಮ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
  ಇವರ ವತಿಯಿಂದ ಪುಷ್ಪಾಂಡಜ ಮಹರ್ಷಿ ಆಶ್ರಮದಲ್ಲಿ ಮದ್ಯವರ್ಜನ ಶಿಬಿರ ಪ್ರಾರಂಭವಾಯಿತು.

1972ನೇ ಮದ್ಯವರ್ಜನ ಶಿಬಿರದ ಅಧ್ಯಕ್ಷ ಕೃಷ್ಣಮೂರ್ತಿ ಕೆ ಎಂ. ರವರು ಉದ್ಘಾಟಿಸಿ ಸಮಾಜದಲ್ಲಿ ವ್ಯಸನಕ್ಕೆ ಬಲಿಯಾಗಿ ತನ್ನ ಜೀವ ಮತ್ತು ಜೀವನವನ್ನು ಹಾಳುಮಾಡಿಕೊಳ್ಳುವಂತಹ ವ್ಯಕ್ತಿಗಳ ಮನಃಪರಿವರ್ತನೆ ಮಾಡುವ ಮೂಲಕ ಒಂದು ಕುಟುಂಬವನ್ನು ಕಟ್ಟುವಂತಹ ಪರಿಕಲ್ಪನೆಯ ಮೂಲಕ ಮದ್ಯವರ್ಜನ ಶಿಬಿರಗಳನ್ನು ನಡೆಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ದರ್ಮಾಧಿಕಾರಿಗಳಾದ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರ ಕಾರ್ಯಕ್ರಮವು ಸಮಾಜದಲ್ಲಿ ಮಾದರಿಯಾದ ಕಾರ್ಯಕ್ರಮವಾಗಿದ್ದು ಈ ಮದ್ಯವರ್ಜನ ಶಿಬಿರದಿಂದಾಗಿ ಇಂದು ನಾನು ಸಮಾಜದಲ್ಲಿ ಉತ್ತಮವಾದ ಸ್ಥಾನವನ್ನು ಪಡೆಯುವಂತಾಗಿದೆ ಎಂದು ತಿಳಿಸುವ ಮೂಲಕ ಶುಭ ಹಾರೖಸಿದರು.

- Advertisement - 

ನಂತರ ನಗರಸಭಾ ಮಾಜಿ ಅಧ್ಯಕ್ಷ ತಾ ನಾ ಪ್ರಭುದೇವ್ ಮಾತನಾಡಿ  ಕುಡಿತದ ಅಮಲಿನಿಂದ ದೂರವಿರಿ. ಮದ್ಯವ್ಯಸನಿಯಿಂದ  ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಇದರಿಂದ ನಿಮ್ಮ ಆರೋಗ್ಯ, ದುಡ್ಡು, ಸಮಾಜ ಹಾಗೂ ನಿಮ್ಮ ಕುಟುಂಬವೇ ಹಾಳಾಗಿ ನೀವು ಬೀದಿಗೆ ಬರುತ್ತೀರಿ. ಈ ಕುಡಿತದಿಂದ ಮುಕ್ತರಾಗಿ ಸುಖ ಜೀವನ ನಡೆಸಿ, ಸಮಾಜದಲ್ಲಿರುವ ಪ್ರತಿಯೊಬ್ಬನಿಗೂ ಸಂಸ್ಕಾರ ಕೊಡುವ ಕಾರ್ಯ ನಡೆಯಬೇಕು. ಒಬ್ಬ ವ್ಯಕ್ತಿಯನ್ನು ಪರಿವರ್ತನೆ ಮಾಡಿ ಸಂಸ್ಕಾರ ಕೊಡುವ ಕಾರ್ಯ ಶ್ರೇಷ್ಠ ಹಾಗೂ ಪುಣ್ಯದ ಕಾರ್ಯ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ    ಶಿಬಿರಗಳು ಸಮಾಜಕ್ಕೆ ಮಾದರಿ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಧರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಶಶಿಕಲಾ, ನಿವೃತ್ತ ಶಿಕ್ಷಕ ಕೆ.ಮಹಲಿಂಗಯ್ಯ,  ಉದ್ಯಮಿ ರವಿ, ಬೆಂಗಳೂರು ಗ್ರಾಮಾಂತರ ಕಲಾವಿದರ ಸಂಘ ಅಧ್ಯಕ್ಷ ಡಾ.ಕೆಂಪಣ್ಣ, ವಿ ಎಂ ಜನಜಾಗೃತಿ ವೇದಿಕೆ ಉಪಾಧ್ಯಕ್ಷರು ನರಸಿಂಹರಾಜು, ಜಿಲ್ಲಾ ನಿರ್ದೇಶಕ ಉಮಾರಬ್ಬ, ಕಂಟನಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭರಾಜ್ ರಾಜ್ ಗೋಪಾಲ್ಜಿಲ್ಲಾ ಜನಜಾಗೃತಿ ಸದಸ್ಯೆ ವಾಣಿ, ಮಮತ, ಪುಷ್ಪ, ಧರ್ಮೆಂದ್ರ, ರಮೇಶ್,

- Advertisement - 

ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್, ದಿನೇಶ್, ಶಿಬಿರಾದಿಕಾರಿ. ದೇವಿಪ್ರಸಾದ್ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ನವಜೀವನ ಸಮಿತಿ ಸದಸ್ಯರು ಭಾಗವಹಿಸಿದ್ದರು.

 

 

Share This Article
error: Content is protected !!
";