ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾದಿಗರೇ ಮಾತನಾಡಬೇಡಿ ನಾಗಮೋಹನ್ ದಾಸ್ ಆಯೋಗದ ವರದಿ ಆಗಸ್ಟ್ 16ರಂದು ಜಾರಿಗೊಳ್ಳುವುದು ಖಚಿತ. ಈ ಮಧ್ಯೆ ಕೆಲವರು ವರದಿ ವಿರುದ್ಧ ಹೇಳಿಕೆ ನೀಡುತ್ತಿರುವುದು ಗೊಂದಲ ಮೂಡಿಸುವ ಷಡ್ಯಂತ್ರವಾಗಿದೆ ಎಂದು ಆಂಜನೇಯ ಆರೋಪಿಸಿದರು.
ಮಾದಿಗ ಸಮುದಾಯ ಯಾವುದೇ ಕಾರಣಕ್ಕೂ ಕೆರಳಬಾರದು. ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ನುಡಿದಂತೆ ನಡೆಯುವ ನಾಯಕ. ಎಂತಹ ಅಡೆತಡೆಗಳು ಎದುರಾದರೂ ಒಳಮೀಸಲಾತಿ ಜಾರಿಗೊಳಿಸಿಯೇ ಸಿದ್ಧ. ಇದಕ್ಕೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಡಾ.ಜಿ.ಪರಮೇಶ್ವರ್ ಸೇರಿ ಎಲ್ಲ ಸಮುದಾಯದ ಸಚಿವರು, ಶಾಸಕರು ಬೆಂಬಲವಾಗಿದ್ದಾರೆ.
ಉದ್ಯೋಗ ನೇಮಕಾತಿಗಳಿಗೆ ತಡೆ ಹಾಕಿರುವುದೇ ಒಳಮೀಸಲಾತಿ ಜಾರಿ ಖಚಿತವೆಂಬ ಗ್ಯಾರಂಟಿ ಆಗಿದೆ. ಈ ವಿಷಯದಲ್ಲಿ ಆತಂಕ ಬೇಕಿಲ್ಲ. ಆದ್ದರಿಂದ ಮಾದಿಗರು ಯಾವುದೇ ಕಾರಣಕ್ಕೂ ಪ್ರತಿಯಾಗಿ ಮಾತನಾಡದೆ ಮೌನವಾಗಿರಬೇಕು ಎಂದು ಕಿವಿಮಾತು ಹೇಳಿದರು.
ಆಸ್ತಿ ಹಂಚಿಕೆ ಸೌಹಾರ್ದ
“70 ವರ್ಷಕ್ಕೂ ಹೆಚ್ಚು ಒಟ್ಟು ಕುಟುಂಬ ನಡೆಸಿದ ಅಣ್ಣ-ತಮ್ಮಂದಿರು ಈಗ ಸೌಹಾರ್ದತೆಯಿಂದ ಆಸ್ತಿ ಹಂಚಿಕೆ ಮಾಡಿಕೊಂಡು ಮೊದಲಿನಂತೆ ಪ್ರೀತಿ-ವಿಶ್ವಾಸದಿಂದಲೇ ಜೀವನ ನಡೆಸುವ ಕ್ರಮವೇ ಒಳಮೀಸಲಾತಿ ಜಾರಿಗೊಳ್ಳುತ್ತಿರುವ ಮೂಲಕ ಉದ್ದೇಶ.
ಆದರೆ, ಇದನ್ನು ಸಹಿಸಿದ, ಸಾಮಾಜಿಕ ನ್ಯಾಯದ ಪರಿಪಾಲನೆ ಹಾಗೂ ಸಂವಿಧಾನದ ವಿರೋಧಿಗಳು ವಿರೋಧ ಮಾಡುತ್ತಿದ್ದಾರೆ. ಅವರ ಸಂಖ್ಯೆ ಬೆರಳೆಣಿಕೆಯಲ್ಲಿದೆ”. ಎಚ್.ಆಂಜನೇಯ, ಮಾಜಿ ಸಚಿವ.

