ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಹಸಿರುಕ್ರಾಂತಿಹರಿಕಾರ ಡಾ.ಬಾಬುಜಗಜೀವನರಾಮ್ ತಮ್ಮದೇಯಾದ ವಿಶೇಷ ಸಾಧನೆಯಮೂಲಕ ವಿಶ್ವದ ಗಮನಸೆಳೆದಿದ್ದಾರೆ. ಶೋಷಿತ, ದೌರ್ಜನ್ಯಕ್ಕೀಡಾದ, ಅವಮಾನಕ್ಕೊಳಗಾದ ಜನಾಂಗಗಳಿಗೆ ಕಾಯಕಲ್ಪವನ್ನು ನೀಡಿದ ಕೀರ್ತಿ ಈ ಇಬ್ಬರೂ ಮಹಾನಾಯಕರದ್ದು. ಇಬ್ಬರೂ ಮಹಾನಾಯಕರನ್ನು ನಾವು ಕಲಿಯುಗದ ಸೂರ್ಯವೆಂದು ಕರೆಯಬಹುದಾಗಿದೆ. ಅವರು ಮಾಡಿದ ಸಾಧನೆ ಇತಿಹಾಸದಲ್ಲಿ ಅಚ್ಚಳಿಯದೆ ಸದಾಕಾಲ ಉಳಿಯಲಿದೆ ಎಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಸೋಮವಾರ ತಾಲ್ಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲ್ಲೂಕುಪಂಚಾಯಿತಿ, ಸಮಾಜಕಲ್ಯಾಣ ಇಲಾಖೆ, ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರವರ ೧೩೪ನೇ, ಬಾಬುಜಗಜೀವನರಾಮ್‌ರವರ ೧೧೮ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ರಾಜಕೀಯದಲ್ಲಿ ಇಬ್ಬರೂ ಮಹಾನ್‌ನಾಯಕರ ಆದರ್ಶಗಳನ್ನು ಅಳವಡಿಸಿಕೊಂಡರೆ ಮಾತ್ರ ರಾಜಕೀಯ ಕ್ಷೇತ್ರದ ಮೌಲ್ಯ ಹೆಚ್ಚುತ್ತದೆ. ಎಂದಿಗೂ ಅಧಿಕಾರಕ್ಕಾಗಿ ಹಾತುವರೆಯದೆ ಈ ಮಹಾನ್‌ನಾಯಕರ ಹೋರಾಟದ ಬದುಕು ಎಲ್ಲರಿಗೂ ಸ್ಪೂರ್ತಿ ಎಂದರು.
ಇದೇ ಸಂದರ್ಭದಲ್ಲಿ ಆಧುನಿಕ ಭಾರತ ನಿರ್ಮಾಣದಲ್ಲಿ ಅಂಬೇಡ್ಕರ್ ಪಾತ್ರ ಪ್ರಬಂಧಸ್ಪರ್ಧೆಯಲ್ಲಿ ವಿಜೇತರಾದ ೬ ವಿದ್ಯಾರ್ಥಿಗಳಿಗೆ ದಲಿತ ಸಂಘಟನೆಗಳ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ ದಲಿತಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹಾನೀಯರನ್ನು ಶಾಸಕರು ಗೌರವಿಸಿದರು. ಸಾಮಾಜಿಕ ಕ್ಷೇತ್ರದಲ್ಲಿ ವಕೀಲ ಬಿ.ಮಲ್ಲಿಕಾರ್ಜುನ್, ಡಿ.ದ್ಯಾಮಯ್ಯ, ನಿಜಲಿಂಗಪ್ಪ, ಪಿ.ರೇಣುಕಮ್ಮ, ಎಚ್.ಎಸ್.ಸೈಯದ್, ಆರ್.ಟಿ.ಸ್ವಾಮಿ, ವೈ.ಟಿ.ಸ್ವಾಮಿ, ಭೀಮನಕೆರೆ ಶಿವಮೂರ್ತಿ, ಆರ್.ಡಿ.ಮಂಜುನಾಥ, ವೈ.ಕಾಂತರಾಜ್, ದ್ಯಾವರನಹಳ್ಳಿತಿಪ್ಪೇಸ್ವಾಮಿ, ಸುಶೀಲಮ್ಮ, ಸಿ.ಜೆ.ಜಯಕುಮಾರ್, ಚನ್ನಿಗರಾಯ, ಸಾಹಿತ್ಯ ಕ್ಷೇತ್ರದಲ್ಲಿ ಜಡೇಕುಂಟೆಮಂಜುನಾಥ, ಮೋದೂರುತೇಜ, ಕೊರ್‍ಲಕುಂಟೆತಿಪ್ಪೇಸ್ವಾಮಿಯವರನ್ನು ಅಭಿನಂದಿಸಲಾಯಿತು.
ಬಿ.ಆರ್.ಅಂಬೇಡ್ಕರ್ ಮತ್ತು ಬಾಬುಜಗಜೀವರಾಮ್‌ರವರ ಬಗ್ಗೆ ಕುರಿತು ಮಾತನಾಡಿದ ಮಲ್ಲಿಕಾರ್ಜುನಹರಸುಳ್ಳಿ, ಅಂಬೇಡ್ಕರ್ ಮತ್ತು ಬಾಬುಜಗಜೀವನರಾಮ್‌ರವರ ತತ್ವ, ಸಿದ್ದಾಂತಗಳು ಪ್ರತಿಯೊಬ್ಬ ವ್ಯಕ್ತಿಯ ಬದಕನ್ನು ಸಾರ್ಥಕಗೊಳಿಸುವ ಎಲ್ಲಾ ಅಂಶಗಳಿಗೆ ಎಂದರು. ಸಂಶೋಧಕ ನವೀನ್‌ಪೂಜರಾಹಳ್ಳಿ ಮಾತನಾಡಿ, ಅಂಬೇಡ್ಕರ್ ಮತ್ತು ಬಾಬುಜಗಜೀವನರಾಮ್‌ರವರ ಪ್ರತಿನಿತ್ಯದ ಹೋರಾಟದ ಬದುಕಿನಿಂದ ನಾವೆಲ್ಲರೂ ಉತ್ತಮ ಹಾದಿಯಲ್ಲಿ ನಡೆದಿದ್ದೇವೆ. ಇವರ ಸಾಧನೆ ಬಗ್ಗೆ ವಿಶ್ವವೇ ಹೆಮ್ಮೆ ಪಡುತ್ತಿದೆ ಎಂದರು.
ಇಬ್ಬರೂ ಮಹಾನ್‌ನಾಯಕ ಸಾಧನೆ ಕುರಿತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್‌ಮೂರ್ತಿ, ಜಡೇಕುಂಟೆಮಂಜುನಾಥ, ಜಿ.ಟಿ.ವೀರಭದ್ರಸ್ವಾಮಿ, ನಗರಸಭೆ ಅಧ್ಯಕ್ಷೆ ಆರ್.ಮಂಜುಳಾಪ್ರಸನ್ನಕುಮಾರ್, ಕೆ.ವೀರಭದ್ರಸ್ವಾಮಿ ಮುಂತಾದವರು ಮಾತನಾಡಿದರು.
ತಹಶೀಲ್ಧಾರ್ ರೇಹಾನ್‌ಪಾಷ ಪ್ರಾಸ್ತಾವಿಕವಾಗಿ ಮಾತನಾಡಿ, ಶೋಷಿತ ಸಮುದಾಯದ ಆಶಾಕಿರಣವಾಗಿ ಇಬ್ಬರೂ ಮಹಾನ್‌ನಾಯಕರು ಹೊರಹೊಮ್ಮಿದ್ಧಾರೆ. ಸಮಾಜದಲ್ಲಿ ಆಳಾವಾಗಿ ಬೇರೂರಿದ್ದ ಜಾತಿಪದ್ದತಿ, ಅಸಮಾನತೆ, ದೌರ್ಜನ್ಯವನ್ನು ತೊಡೆದು ಹಾಕಲು ಶ್ರಮಿಸಿದ ಮಹಾನ್‌ನಾಯಕರು ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಟಿ.ವೀರೇಶ್, ಗ್ಯಾರಂಟಿ ಸಮಿತಿ ತಾಲ್ಲೂಕು ಅದ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಕೆಡಿಪಿ ಸದಸ್ಯ ಓ.ರಂಗಸ್ವಾಮಿ, ತಾಲ್ಲೂಕು ಪಂಚಾಯಿತಿ ಕೆಪಿಡಿ ಸದಸ್ಯರಾದ ಎಂ.ರಮೇಶ್, ನೇತ್ರಾವತಿ, ನಗರಸಭಾ ಸದಸ್ಯರಾದ ಎಂ.ಜೆ.ರಾಘವೇಂದ್ರ, ರಮೇಶ್‌ಗೌಡ, ಜಯಲಕ್ಷ್ಮಿ,ವಿರೂಪಾಕ್ಷಿ, ಚಳ್ಳಕೆರೆಯಪ್ಪ, ಸಮರ್ಥರಾಯ, ಟಿ.ವಿಜಯಕುಮಾರ್, ನಾಮಿನಿ ಸದಸ್ಯರಾದ ನೇತಾಜಿಪ್ರಸನ್ನ, ವೀರಭದ್ರಪ್ಪ, ನmರಾಜ್, ಅನ್ವರ್‌ಮಾಸ್ಟರ್, ಬಡಗಿಪಾಪಣ್ಣ, ಇಒ ಎಚ್.ಶಶಿಧರ, ಪೌರಾಯುಕ್ತ ಜಗರೆಡ್ಡಿ, ಬಿಇಒ ಕೆ.ಎಸ್.ಸುರೇಶ್, ಡಿವೈಎಸ್ಪಿ ಟಿ.ಬಿ.ರಾಜಣ್ಣ, ಸಮಾಜಕಲ್ಯಾಣಾಧಿಕಾರಿ ಜೆ.ದೇವಲಾನಾಯ್ಕ, ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ, ಪಶುವೈದ್ಯಾಧಿಕಾರಿ ರೇವಣ್ಣ, ಕೃಷಿ ಅಧಿಕಾರಿ ಜೆ.ಅಶೋಕ್, ಸಿಡಿಪಿಒ ಹರಿಪ್ರಸಾದ, ಎಸ್ಟಿ ಕಲ್ಯಾಣಧಿಕಾರಿ ಶಿವರಾಜ್, ಬೆಸ್ಕಾಂ ಅಧಿಕಾರಿ ಶಿವಪ್ರಸಾದ್, ಬಿಸಿಎಂ ಅಧಿಕಾರಿ ರಮೇಶ್ ಮುಂತಾದವರು ಭಾಗವಹಿಸಿದ್ದರು.