ಭಾರತೀಯ ಪ್ರಾಸ್ಥೊಡಾಂಟಿಕ್ ಸೊಸೈಟಿ ರಾಜ್ಯಾಧ್ಯಕ್ಷರಾಗಿ ಡಾ.ಆನಂದ್ ಕುಮಾರ್ ಪಾಟೀಲ್ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇತ್ತೀಚಿಗೆ ದಾವಣಗೆರೆಯಲ್ಲಿ ನಡೆದ
11 ನೇ ಕರ್ನಾಟಕ ರಾಜ್ಯ ಭಾರತೀಯ ಪ್ರಾಸ್ಥೊಡಾಂಟಿಕ್ಸ್  ಸೊಸೈಟಿಯ ಕರ್ನಾಟಕ ರಾಜ್ಯ ಶಾಖೆಯ ಸಮ್ಮೇಳನದಲ್ಲಿ,

- Advertisement - 

ಬೆಳಗಾವಿಯ ಕೆ ಎಲ್ ಇ ವಿಶ್ವನಾಥ್ ಕತ್ತಿ ದಂತ ಮಹಾವಿದ್ಯಾಲಯದ ಪ್ರಾಸ್ಥೊಡಾಂಟಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ. ಆನಂದಕುಮಾರ್ ಜಿ. ಪಾಟೀಲ್ ಅವರು ಭಾರತೀಯ ಪ್ರಾಸ್ಥೊಡಾಂಟಿಕ್ ಸೊಸೈಟಿ, ಕರ್ನಾಟಕ ಶಾಖೆಯ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 

- Advertisement - 

ಈ ನೇಮಕಾತಿಯು ಡಾ.ಆನಂದಕುಮಾರ್ ಜಿ. ಪಾಟೀಲ್ ಅವರು ಪ್ರಾಸ್ಥೊಡಾಂಟಿಕ್ಸ್ ಕ್ಷೇತ್ರವನ್ನು ಮುನ್ನಡೆಸುವಲ್ಲಿ ಅವರ ಸಮರ್ಪಣೆ ಮತ್ತು ದಂತ ಶಿಕ್ಷಣ ಮತ್ತು ರೋಗಿಗಳ ಆರೈಕೆಗೆ ಅವರ ನಿರಂತರ ಕೊಡುಗೆಗಳಿಗೆ  ಅರ್ಹವಾದ ಮನ್ನಣೆಯಾಗಿದೆ.

- Advertisement - 
Share This Article
error: Content is protected !!
";