ಮಕ್ಕಳಲ್ಲಿನ ಸುಪ್ತ ಪ್ರತಿಭೆಗೆ ಚಿಗುರು ಪ್ರೋತ್ಸಾಹ- ಡಾ.ಬಿ.ಎಂ.ಗುರುನಾಥ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಕಲಾ ಮಾಧ್ಯಮದ ಮೂಲಕ ಹೊರತೆಗೆಯುವ ಪ್ರಯತ್ನದ ಭಾಗವೇ ಚಿಗುರು ಕಾರ್ಯಕ್ರಮ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ಹೇಳಿದರು.
ಹೊಸದುರ್ಗ ತಾಲ್ಲೂಕಿನ ಬಾಗೂರಿನ ವಿದ್ಯಾವಾಹಿನಿ ವಿದ್ಯಾನಿಕೇತನ ಶಾಲಾ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಚಿಗುರು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿಗುರು ಕಾರ್ಯಕ್ರಮ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಹತ್ವದ ಯೋಜನೆಯು ಹೌದು. ಇಂದು ನಮ್ಮ ಮಕ್ಕಳನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸಿದ್ದೇವೆ. ಹಾಗಾಗಿ ಅವರ ಮಾನಸಿಕ ವಿಕಾಸ ಕುಂಠಿತವಾಗಲಿಕ್ಕೆ ನಾವೇ ಕಾರಣವಾಗುತ್ತಿದ್ದೇವೆ ಎಂದು ತಿಳಿಸಿದ ಅವರು,

- Advertisement - 

ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ತೊಡಗಿಸುವ ಮೂಲಕ ಪಠ್ಯೇತರವಾಗಿಯೂ ಅವರನ್ನು ಬೆಳೆಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಇಲ್ಲಿ  ಪ್ರದರ್ಶನವಾಗುವ ಸುಗಮ ಸಂಗೀತ, ಜಾನಪ ಸಂಗೀತ, ನಾಟಕ  ಇತ್ಯಾದಿಗಳು ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು.

ಚಿಗುರು ಕಾರ್ಯಕ್ರಮದ ಅಂಗವಾಗಿ ಶಾಲೋಮ್ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಎಂ.ವೇದಿಕಾ ಅವರಿಂದ ಸುಗಮ ಸಂಗೀತ, ನಾಗೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪಿ.ಕೆ.ಸ್ವಾಮಿ ಮತ್ತು ತಂಡದವರಿಂದ ಜಾನಪದ ಗೀತೆಗಳು, ಭೂಮಿಕಾ ಮತ್ತು ತಂಡದವರಿಂದ ಸಮೂಹ ನೃತ್ಯ, ಭುವನ್ಯ ರಾವ್ ಮತ್ತು ತಂಡದವರಿಂದ ನಾಟಕ ಹಾಗೂ ವಿದ್ಯಾವಾಹಿನಿ ವಿದ್ಯಾನಿಕೇತನ ಶಾಲೆಯ ಕೆ.ಆರ್.ಬಿಂದುಶ್ರೀ ಅವರಿಂದ ಏಕ ಪಾತ್ರಾಭಿನಯ ನಡೆಸಿಕೊಟ್ಟರು.

- Advertisement - 

ಕಾರ್ಯಕ್ರಮದಲ್ಲಿ ಬಾಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಶಾರದಮ್ಮ, ಸ್ವಾಮಿ  ವಿವೇಕಾನಂದ ಮತ್ತು ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷ ಕೆ.ಶ್ರೀನಿವಾಸ್, ಕಾರ್ಯದರ್ಶಿ ಬಿ.ಜಿ.ರಂಗನಾಥ್, ವಿದ್ಯಾವಾಹಿನಿ ವಿದ್ಯಾನಿಕೇತನ ಶಾಲೆಯ ಮುಖ್ಯ ಶಿಕ್ಷಕ ಕೆ.ಮಂಜುನಾಥ್, ಕಲಾವಿದ ಕಂಠೇಶ್ ಇದ್ದರು.

 

 

Share This Article
error: Content is protected !!
";