ಡಾ. ಬಾಬು ಜಗಜೀವನ್ ರಾಮ್ ಹಸಿರು ಕ್ರಾಂತಿ ಹರಿಕಾರರು… ಧೀರಜ್ ಮುನಿರಾಜ್

News Desk
- Advertisement -  - Advertisement - 

ಡಾ. ಬಾಬು ಜಗಜೀವನ್ ರಾಮ್ ಹಸಿರು ಕ್ರಾಂತಿ ಹರಿಕಾರರು… ಧೀರಜ್ ಮುನಿರಾಜ್

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:ಮಾಜಿ ಉಪಪ್ರಧಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಮ್ ಅವರ 119ನೇ ಜನ್ಮದಿನಾಚರಣೆಯನ್ನು ತಾಲೂಕಿನ ವಿವಿಧೆಡೆಗಳಲ್ಲಿ ಆಚರಿಸಲಾಯಿತು.
ನಗರದ ಸಿದ್ದಲಿಂಗಯ್ಯ ವೃತ್ತದ ಬಳಿಯಿರುವ ಡಾ. ಬಾಬು ಜಗಜೀವನ ರಾಮ್ ಅವರ ಪ್ರತಿಮೆಗೆ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳಿಂದ ಮಾಲಾರ್ಪಣೆ ಮಾಡಲಾಯಿತು. ನಂತರ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಡಾ. ಬಾಬು ಜಗಜೀವನ ರಾಮ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಶಾಸಕ ಧೀರಜ್ ಮುನಿರಾಜು  ಮಾತನಾಡಿ, ಹಸಿರು ಕ್ರಾಂತಿಯ ಮೂಲಕ ಆಹಾರದ ಕೊರತೆ ನೀಗಿ, ದೀನ ದಲಿತರ, ಶೋಷಿತರ ನೋವುಗಳನ್ನು ಅನುಭವಿಸುವ ಮೂಲಕ ಅವರ ಬಾಳಿಗೆ ಉತ್ತಮ ಮಾರ್ಗ ತೋರಿಸಿದ್ದ ಡಾ. ಬಾಬು ಜಗಜೀವನ ರಾಮ್ ಅವರು ಸಜ್ಜನ ರಾಜಕಾರಣಿ ಯಾಗಿದ್ದರು.
ಬಾಬೂಜಿ ಅವರು ರಕ್ಷಣಾ ಸಚಿವರಾಗಿ ಅಮೋಘ ಸಾಧನೆ ಮಾಡಿದ್ದಾರೆ. ಇವರು ಭಾರತದ ಸ್ವಾತಂತ್ರ್ಯ ಹೋರಾಟಗಾರ,  ಹಸಿರು ಕ್ರಾಂತಿಯ ರೂವಾರಿ ಮತ್ತು ದಲಿತ ನಾಯಕರಾಗಿದ್ದರು. ಶೋಷಿತ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ಈ ಮಹಾನ್ ನಾಯಕನ ಸ್ಮರಣಾರ್ಥವಾಗಿ, ವಿಶೇಷ ವಾಗದೆ ಹಾಗು ಅವರ ನಿರಂತರ 40 ವರ್ಷಗಳ ರಾಜಕೀಯ ಜೀವನದಲ್ಲಿ ಉಪ ಪ್ರದಾನಿಗಳಾಗಿ ವಾರ್ತಾ ಹಾಗು ಪ್ರಸಾರ ಸಾರಿಗೆ ರೈಲ್ವೇ ಕಾರ್ಮಿಕ ಪುನರ್ವಸತಿ ಆಹಾರ ಕೃಷಿ ಸಹಕಾರ ನೀರಾವರಿ ಇತ್ಯಾದಿ ಖಾತೆಗಳನ್ನು ಯಶಸ್ವಿಯಾಗಿ
ನಿರ್ವಹಿಸಿದ್ದರು. ದೇಶದ ಪ್ರಗತಿಯು ನಿತ್ಯದ ಶ್ರಮ, ಸಮಗ್ರ ಯೋಜನೆ ಮತ್ತು ಸಮುದಾಯದ ಸಹಕಾರದ ಮೂಲಕ  ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್  ಮಲ್ಲಪ್ಪ ಕೆ. ಯಾರಗೋಳ,  ಓಬದೇನಹಳ್ಳಿ ಮುನಿಯಪ್ಪ, ತಳವಾರ ನಾಗರಾಜ್, ಮುನಿಯಪ್ಪ,  ನಾಗರಾಜ್, ಕನ್ನಡ ಪರ ರೈತ ಪರ ದಲಿತ ಪರ ಸಂಘಟನೆಯ ಹೋರಾಟಗಾರರು ಹಾಜರಿದ್ದರು.

- Advertisement - 
Share This Article
error: Content is protected !!
";