ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಗರದ ಡಾ. ಬಾಬು ಜಗಜೀವನ್ ರಾಂ ಭವನದದ ನವೀಕರಣ ಕಾಮಗಾರಿಗೆ ಶಾಸಕ ಧೀರಜ್ ಮುನಿರಾಜು ಗುರುವಾರ ಭೂಮಿ ಪೂಜೆ ಮಾಡಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ತಾಲ್ಲೂಕಿನಲ್ಲಿರುವ ಸರ್ಕಾರಿ ಕಟ್ಟಡಗಳಲ್ಲಿ ಅತಿ ವಿಶಾಲ ಹಾಗೂ ಬೃಹತ್ ಕಟ್ಟಡ ಹೊಂದಿರುವ ಡಾ.ಜಗಜೀವನ್ ರಾಂ ಭವನದಲ್ಲಿ ಹಲವು ಕುಂದು ಕೊರತೆಗಳ ಕಾರಣದಿಂದಾಗಿ ಸಾರ್ವಜನಿಕರ ಸದ್ಬಳಕೆ ಪ್ರಮಾಣ ಕಡಿಮೆಯಾಗಿದೆ, ಹೀಗಾಗಿ ಭವನದಲ್ಲಿನ ಸೌಂಡ್ ಸಿಸ್ಟಮ್, ಅಡ್ಡಿಗೆ ಸಂಬಂಧಿತ ವಸ್ತುಗಳು, ಮೋಲ್ಡಿಂಗ್ ಸೇರಿದಂತೆ ಇತರ ನೂನ್ಯತೆಗಳನ್ನು ಸರಿಪಡಿಸಲಾಗುವುದು.
ಕಾಮಗಾರಿಗಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 1.5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಭವನದ ಅಭಿವೃದ್ಧಿ ಕಾರ್ಯಕ್ಕಾಗಿ ಪ್ರತ್ಯೇಕ ಸಮಿತಿಯನ್ನು ರಚಿಸುವ ಮೂಲಕ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿಯನ್ನು ಶೀಘ್ರ ಮುಕ್ತಾಯಗೊಳಿಸಲಾಗಿವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಸುಮಿತ್ರಾ, ಸದಸ್ಯರಾದ ಶಿವು,ವೆಂಕಟೇಶ್, ವತ್ಸಲಾ, ಹಂಸಪ್ರಿಯ,ವಕೀಲರಾದ ಕಾಂತರಾಜು, ಜೆ. ವೈ. ಮಲ್ಲಪ್ಪ ಹಲವರು ಹಾಜರಿದ್ದರು.

