ಚಂದ್ರವಳ್ಳಿ ನ್ಯೂಸ್, ಹೊಸಪೇಟೆ(ವಿಜಯನಗರ):
ಹೊಸಪೇಟೆಯ ಪಾಂಡುರಂಗ ಕಾಲೋನಿ ಎಂ.ಪಿ ಪ್ರಕಾಶ್ ನಗರ ರಸ್ತೆ( ರಿಲಯನ್ಸ್ ಸ್ಮಾರ್ಟ್ ಬಜಾರ್ ಪಕ್ಕದಲ್ಲಿ)ರುವ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಸಿಹಿ ಹಂಚುವುದರ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.
ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ .ಎಸ್. ರಾಜು ಮಾತನಾಡಿ, ಡಾ.ಬಿ ಆರ್. ಅಂಬೇಡ್ಕರ್ ರವರು ನ್ಯೂಯಾರ್ಕ್ ನ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಅಧ್ಯಯನ ಮಾಡಿ ಗೌರವ ಡಾಕ್ಟರೇಟ್ ಪಡೆದರು. ಅವರು ಜಾತಿ ತಾರತಮ್ಯ ಹಾಗೂ ಅಸ್ಪೃಶ್ಯತೆಯ ವಿರುದ್ಧ ಹೋರಾಟ ಪ್ರಾರಂಭಿಸಿದ್ದರು.
ಅವರು ಭಗವಾನ್ ಬುದ್ಧ, ಸಂತ ಕಬೀರ, ಮಹಾತ್ಮಪುಲೆ, ಅವರ ಜೀವನದ ಆದರ್ಶ ವ್ಯಕ್ತಿಗಳಾಗಿದ್ದರು. ಅವರು 1920 ರಲ್ಲಿ ಮೂಕ ನಾಯಕ ಎಂಬ ಪತ್ರಿಕೆ ಪ್ರಾರಂಭಿಸಿದರು. ಹಾಗೂ ತಮ್ಮ ಸ್ವಂತ ಗ್ರಂಥಾಲಯ ರಾಜಗ್ರಿಹದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿ ವಿಶ್ವದ ಅತಿ ದೊಡ್ಡ ವೈಯಕ್ತಿಕ ಗ್ರಂಥಾಲಯ ಎಂಬ ಹೆಗ್ಗಳಿಕೆಗೆ ಕಾರಣೀಭೂತರಾದರು.
ಅವರನ್ನು ಭಾರತದ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಯಿತು. ಭಾರತದ ಸಂವಿಧಾನ ಶಿಲ್ಪಿ ಎಂದೇ ಕರೆಯುತ್ತೇವೆ. ದೇಶದ ಮೊದಲ ಕಾನೂನು ಸಚಿವರಾಗಿದ್ದ ಅವರು 1990ರಲ್ಲಿ ಅವರಿಗೆ ಮರಣೋತ್ತರ ಭಾರತ ರತ್ನ ಎಂಬ ಬಿರುದು ನೀಡಿ ಗೌರವಿಸಲಾಯಿತು. ಅವರ ಜನ್ಮದಿನವನ್ನು ಪ್ರತಿವರ್ಷ ಜಯಂತಿಯಾಗಿ ಆಚರಿಸಲಾಗುತ್ತಿದೆ.
ಅವರು ರಚಿಸಿದ ಸಂವಿಧಾನವೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಭದ್ರ ಬೂನಾದಿಯಾಗಿದೆ ಎಂದು ಹೇಳಿದರು.
ಸಂಸ್ಥೆಯ ವ್ಯವಸ್ಥಾಪಕ ಚಾಂದ್ ಬಾಷಾ, ರಾಮು, ಅಶ್ರೀತ್, ಪತ್ರಕರ್ತರಾದ ಮಮ್ಮದ್ ಗೌಸ್, ವಿಜಯವಾಣಿ ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.