ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ :
ತಾಲೂಕಿನ ಹಾರಕಬಾವಿ ಗ್ರಾಮದಲ್ಲಿ ಸುಮಾರು 5 ಲಕ್ಷ ರೂ ವೆಚ್ಚದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಮಿನಿ ಭವನ ಕಾಮಗಾರಿಯ 2005-6ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ 2009-10ನೇ ಸಾಲಿನ ಶಾಸಕರ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಪೂರ್ಣಗೊಂಡಿದೆ, ಆದರೆ ಅದರ ನಿರ್ವಹಣೆ ಮತ್ತು ಸ್ವಚ್ಛತೆ ಮರೀಚಿಕೆಯಾಗಿದ್ದು ಮಿನಿ ಅಂಬೇಡ್ಕರ್ ಭವನದ ಸುತ್ತಲೂ ಮುಳ್ಳಿನ ಗಿಡಗಂಟೆಗಳಿಂದ ತುಂಬಿಕೊಂಡಿದೆ ವಿದ್ಯುತ್ ವ್ಯವಸ್ಥೆಯು ಕೂಡ ಇಲ್ಲವೇ ಕತ್ತಲಿನಲ್ಲಿ ಇರುವಂತಾಗಿದೆ,
ಭವನಕ್ಕೆ ಸರಿಯಾದ ಬಾಗಿಲು ಕಿಟಕಿಗಳಿಲ್ಲದೆ ಒಂದು ಭೂತ ಬಂಗಲೆಯಂತೆ ಕಾಣುತ್ತಿದೆ ಇನ್ನು ಸೂಕ್ತ ಚರಂಡಿ ಆಸ್ತಿ ಇಲ್ಲದೆ ಚರಂಡಿಯ ನೀರು ಭವನದ ಸುತ್ತಲೂ ನಿಂತ ಕಾರಣ ಅದರಲ್ಲಿ ವಿಷ ಜಂತುಗಳು ಕ್ರಿಮಿ ಕೀಟಗಳ ತಾಣವಾಗಿದೆ, ಇನ್ನು ಸಾರ್ವಜನಿಕರ ಕಾರ್ಯಕ್ರಮಗಳಿಗೆ ಮಿನಿ ಭವನ ಉಪಯೋಗಕ್ಕೆ ಬಾರದಂತಾಗಿದೆ, ಲಕ್ಷಾಂತರ ರೂಗಳ ವೆಚ್ಚ ನೀರಲ್ಲಿ ಹೋಮ ಮಾಡಿದಂತಾಗಿದೆ,
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ವಚ್ಛತೆ ಕಾರ್ಯ ಕೈಗೊಂಡು ಮಿನಿ ಭುವನದ ಸುತ್ತಮುತ್ತಲಿರುವ ಮುಳ್ಳಿನ ಗಿಡ ಗಂಟೆಗಳನ್ನು ತೆರವುಗೊಳಿಸಿ, ಸಾರ್ವಜನಿಕರು ಹಾಕುವಂತ ಕಸವನ್ನು ತೆಗೆಸಿ ಸೂಕ್ತ ಚರಂಡಿ ಸಿಸಿ ರಸ್ತೆಯನ್ನು ನಿರ್ಮಿಸಿ ಕೊಡುವಂತೆ ಭವನಕ್ಕೆ ವಿದ್ಯುತ್ ಸಂಪರ್ಕ ಸೇರಿದಂತೆ ಕಿಟಕಿ ಬಾಗಿಲು ಕಲ್ಪಿಸಬೇಕಿದೆ ಅದಲ್ಲದೆ, ಭವನದ ಆವರಣದಲ್ಲಿ ಬಿಡಾಡಿ ದನಗಳು ಹಾಗೂ ಬೀದಿ ನಾಯಿಗಳ ವಾಸಸ್ಥಾನ ವಾಗಿ ಮಾರ್ಪಟ್ಟಿದೆ, ಭವನದ ಆವರಣ ಪುಂಡಪೋಕರಿಗಳ ಆಶ್ರಯ ತಾಣವಾಗಿದ್ದು ಅನೈತಿಕ ಚಟುವಟಿಕೆ ತಾಣವಾಗುವ ಮುನ್ನ, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
“ನಮ್ಮ ಗ್ರಾಮದಲ್ಲಿ ಸುಮಾರು 20 ವರ್ಷಗಳ ಹಿಂದೆ ನಿರ್ಮಾಣವಾದ ಈ ಕಟ್ಟಡಕ್ಕೆ ಸಂಬಂಧಪಟ್ಟ ಅಧಿಕಾರಿಗಳಾಗಲಿ ಇತ್ತ ತಿರುಗಿ ನೋಡಲ್ಲ ಊರಿನ ಚರಂಡಿ ನೀರು ಎಲ್ಲವೂ ಭವನದ ಹತ್ತಿರ ಬಂದು ನಿಲ್ಲುತ್ತವೆ ಇದರಿಂದ ವಿಷ ಜಂತುಗಳು ಹಾಗೂ ಸೊಳ್ಳೆಗಳ ಹಾವಳಿಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ, ಅದಕ್ಕಾಗಿ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗುತ್ತಿಲ್ಲ ತಕ್ಷಣವೇ ಎಚ್ಚೆತ್ತು ಸ್ವಚ್ಛತೆ ಹಾಗೂ ನಿರ್ವಹಣೆ ಬಗ್ಗೆ ಕ್ರಮ ಕೈಗೊಂಡಿದೆ ಸರಿ ಇಲ್ಲವಾದರೆ, ಪಂಚಾಯತಿಯ ಆವರಣದಲ್ಲಿ ಧರಣಿ ಸತ್ಯಾಗ್ರಹ ಮಾಡಲಾಗುವುದು”.
ಸಿದ್ದನಹಳ್ಳಿ ತಿಪ್ಪೇಶ್, DSS ಗ್ರಾಮ ಘಟಕ ಸಂಚಾಲಕ .
“ಭವನದ ಸುತ್ತಲೂ ಗಿಡ ಗಂಟೆ ಬೆಳೆದಿರುವುದು ಚರಂಡಿಯ ನೀರು ಭವನದ ಮುಂದೆ ನಿಂತಿರುವುದು, ನಮ್ಮ ಗಮನಕ್ಕೆ ಇದೆ ಭವನದ ಮುಂದೆ ನರೇಗಾ ಯೋಜನೆ ಅಡಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಕ್ರಿಯಾ ಯೋಜನೆಯಲ್ಲಿದೆ, ಅನುವದಿನಗೊಂಡ ನಂತರ 15 ರಿಂದ 20 ದಿನಗಳಲ್ಲಿ ಕಾಮಗಾರಿ ಪ್ರಾರಂಭ ಮಾಡುತ್ತವೆ ಮತ್ತು ಸುತ್ತಮುತ್ತಲಿನ ಸ್ವಚ್ಛತೆಗೆ ಮುಂದಾಗುತ್ತೇವೆ”.
ವೀರಣ್ಣ, ಪಿಡಿಒ, ಗ್ರಾಪಂ, ಹಾರಕಬಾವಿ.

