ಉಪನ್ಯಾಸಕರ ಜೀವನ ನಿರಂತರ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು : ಡಾ.ಚಂದ್ರಯ್ಯ 

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಉಪನ್ಯಾಸಕರು ನಿರಂತರ ಕಲಿಕೆಯಲ್ಲಿ ತೊಡಗಿಕೊಂಡಾಗ ಮಾತ್ರ ಮಕ್ಕಳ ಕಲಿಕೆಯನ್ನು ಯಶಸ್ವಿಗೊಳಿಸಬಹುದು ಎಂದು ಶಿರಾ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾದ ಡಾ.ಚಂದ್ರಯ್ಯ ತಿಳಿಸಿದರು.
 

- Advertisement - 

ಶುಕ್ರವಾರ ಬಾಪೂಜಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗು ಜಿಲ್ಲಾ ಕನ್ನಡ ಉಪನ್ಯಾಸಕರ ವೇದಿಕೆ ವತಿಯಿಂದ ಆಯೋಜಿಸಿದ್ದ ಕನ್ನಡ ಉಪನ್ಯಾಸಕರಿಗೆ ಪುನಶ್ಚೇತನ ಕಾರ್ಯಗಾರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಪ್ರತಿಯೊಂದು ಶಾಲೆಯ ಕೋಣೆಗಳಲ್ಲಿ ದೇಶದ ಭವಿಷ್ಯ ಅಡಗಿದ್ದು, ಆ ಭವಿಷ್ಯ ಉಜ್ವಲವಾಗಬೇಕಾದರೆ ಮೊದಲು ಶಿಕ್ಷಕ ಮತ್ತು ಉಪನ್ಯಾಸಕರು ನಿರಂತರ ಕಲಿಕೆಯಲ್ಲಿ ತೊಡಗಿಕೊಂಡಾಗ ಮಾತ್ರ ಸಾದ್ಯವಾಗುತ್ತದೆ ಎಂದು ತಿಳಿಸಿದರು. 

- Advertisement - 

ಕಾರ್ಯಾಗಾರದ ಸಂಚಾಲಕರಾದ ನೇರಂ ನಾಗರಾಜು ಮಾತನಾಡಿ ನಮ್ಮ ಜಿಲ್ಲೆಯ ಉಪನಿರ್ದೇಶಕರಾದ ಡಾ.ಬಾಲ ಗುರುಮೂರ್ತಿ ಅವರ ಆಶಯದಂತೆ ಈಗಾಗಲೇ ಎಲ್ಲಾ ವಿಷಯಗಳ ಕಾರ್ಯಾಗಾರಗಳು ನಡೆದಿದ್ದು, ಇಲಾಖೆಯ ನಿಯಮದಂತೆ ಮತ್ತೊಮ್ಮೆ ಪುನಶ್ಚೇತನ ಕಾರ್ಯಗಾರ ನಡೆಯುತ್ತಿರುವುದು ಉಪನ್ಯಾಸಕರ ಕಲಿಕೆಯ ಪುನಶ್ಚೇತನಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು. 

ಶಿಕ್ಷಕರು ಹರಿಯುತ್ತಿರುವ ನೀರಿನಂತೆ ಇರಬೇಕೇ ಹೊರತು ನಿಂತ ನೀರಾಗಬಾರದು, ನಮ್ಮ ತರಗತಿಯ ಸಮಯದಲ್ಲಿ ಪಠ್ಯ ವಿಷಯಗಳ ಬಗ್ಗೆ ಇನ್ನಷ್ಟು ಹೆಚ್ಚಿನ ಅಂಶಗಳನ್ನು ತಿಳಿದುಕೊಂಡು ಮಕ್ಕಳ ಮನಸ್ಸಿಗೆ ನಾಟುವಂತೆ ಪಾಠ ಪ್ರವಚನ ಮಾಡಲು ಇಂತಹ ಕಾರ್ಯಾಗಾರಗಳು ಅತ್ಯಂತ ಪ್ರಮುಖ ಪಾತ್ರವನ್ನು ಕಟ್ಟಿಕೊಡುತ್ತವೆ ಎಂದು ತಿಳಿಸಿದರು. 

- Advertisement - 

ಬಾಪೂಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಮಂಗಲ ಜೇಮ್ಸ್, ವಿಷಯ ತಜ್ಞರಾದ ಡಾ.ದೇವರಾಜು, ಜಕ್ಕೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಚಂದ್ರಪ್ಪ, ಶಶಿಭೂಷಣ್, ಜನಪತಿ ರಾಮಕೃಷ್ಣಡಾ.ಡಿ. ಹೆಚ್ ಮಂಜುನಾಥ್, ಡಾ.ನರಸಿಂಹ ಮೂರ್ತಿ, ಜಿಲ್ಲಾ ಕನ್ನಡ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷರಾದ ಗೋವಿಂದಪ್ಪ, ಅಧ್ಯಕ್ಷ ಹಾಗು ಪ್ರಾಂಶುಪಾಲರಾದ ಸತೀಶ್.ಸಿ.ಜಿ, ಉಪನ್ಯಾಸಕರಾದ ಯತೀಶ್, ಪ್ರಾಂಶುಪಾಲರಾದ ನಟೇಶ್, ವೆಂಕಟಾಚಲ, ಶೈಲಜಾ ಇತರರಿದ್ದರು.

 

Share This Article
error: Content is protected !!
";