ತುಲಾಭಾರದ ಹರಕೆ ತೀರಿಸಿದ ಡಾ.ಧನಂಜಯ ಸರ್ಜಿ

khushihost

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ : ಗಣೇಶೋತ್ಸವ ಅಂಗವಾಗಿ ಎಂಎಲ್‌ಸಿ ಡಾ!!ಧನಂಜಯ ಸರ್ಜಿ ಅವರಿಗೆ ತುಲಾಬಾರ ನಡೆದಿದೆ. ಎಂ ಎಲ್ ಸಿ ಚುನಾವಣೆಯಲ್ಲಿ ಗೆದ್ದವೇಳೆ ಗಣಪತಿ ಉತ್ಸವದಲ್ಲಿ ಡಾ!!.ಸರ್ಜಿ ಅವರಿಗೆ ತುಲಾಬಾರ ನಡೆಸುವುದಾಗಿ ಹಿರಿಯರೊಬ್ಬರು ಹರಕೆ ಹೊತ್ತುಕೊಂಡಿದ್ದು ಆ ಹರಕೆಯನ್ನು ನಿನ್ನೆ ಡಾ!!.ಸರ್ಜಿ ನಡೆಸಿಕೊಟ್ಟಿದ್ದಾರೆ.

ಶಿವಮೊಗ್ಗ ನಗರದ ಜಿ ಎಸ್ ಬಿ ಸಮಾಜದ ಲಕ್ಷ್ಮಿ ವೆಂಕಟರಮಣ ದೇವಾಲಯದಲ್ಲಿ ಶಿವಮೊಗ್ಗ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವತಿಯಿಂದ 59 ನೇ ಗಣೇಶೋತ್ಸವದ ಅಂಗವಾಗಿ ಭಾನುವಾರ ತುಲಾಭಾರ ಸೇವೆಯನ್ನ ಹಮ್ಮಿಕೊಳ್ಳಲಾಗಿತ್ತು.‌

ಡಾ!!.ಸರ್ಜಿ ಅವರು ಕುಟುಂಬ ಸಮೇತರಾಗಿ ತುಲಾಬಾರದಲ್ಲಿ ಪಾಲ್ಗೊಂಡು ಹರಕೆ ನಡೆಸಿಕೊಟ್ಟಿದ್ದಾರೆ. ಬೆಲ್ಲದ ತುಲಾಭಾರ ಸೇವೆಯನ್ನು ಮಾಡಿ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಲಾಯಿತು. ಈ ವೇಳೆ ಸಮಾಜದ ಅಧ್ಯಕ್ಷ ಭಾಸ್ಕರ್ ಜಿ ಕಾಮತ್ , ನಿರ್ದೇಶಕರುಗಳು, ಸಮಾಜದ ಮಾತೃ ಮಂಡಳಿ ಸೇರಿದಂತೆ ಭಕ್ತರು ಭಾಗವಹಿಸಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";