ಡಾ.ಜಿ ಪರಮೇಶ್ವರ್ ಮತ್ತು ಡಿಸಿಎಂ ಶಿವಕುಮಾರ್ ಸಮಾಲೋಚನೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಮಂಗಳವಾರ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿ ಹಲವು ವಿಚಾರಗಳ ಕುರಿತು ಸಮಾಲೋಚನೆ ನಡೆಸಿದರು.
ಇದೇ ಸಂದರ್ಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಜಿ ಪರಮೇಶ್ವರ್ ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ಕುರಿತಾಗಿ ಮಾತನಾಡಿದ ಪರಮೇಶ್ವರ್, ಇವತ್ತು ಉಪಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ತುಮಕೂರಿನಲ್ಲಿ ಜನವರಿ-16ನೇ ತಾರೀಕಿನಿಂದ 22 ನೇ ತಾರೀಖಿನವರೆಗೂ ಕ್ರೀಡಾಕೂಟ ಆಯೋಜನೆ ಮಾಡಿದ್ದೇವೆ. ಅದಕ್ಕೆ ಅವರನ್ನ ಆಹ್ವಾನ ಮಾಡೋದಕ್ಕೆ ಬಂದಿದ್ದೆ. 16 ರಿಂದ 22ರ ವೇಳೆಗೆ ಸಮಯ ನೋಡ್ಕೊಂಡು ಬರ್ತೀನಿ ಅಂತ ಹೇಳಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.

- Advertisement - 

ಆಯೋಜನೆ ಮಾಡಲಾಗಿರುವ ಕ್ರೀಡಾಕೂಟದಲ್ಲಿ 8 ಸಾವಿರ ಕ್ರೀಡಾಪಟುಗಳು ಭಾಗವಹಿಸುತ್ತಾರೆ. 27 ಕ್ರೀಡೆಗಳನ್ನು ಆಯೋಜನೆ ಮಾಡಿದ್ದೇವೆ. ಇದು ದೊಡ್ಡ ಕ್ರೀಡಾಕೂಟ. 16 ರಂದು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡುತ್ತಾರೆ. 22ನೇ ರಂದು ನಡೆಯಲಿರುವ ಸಮಾರೋಪಕ್ಕೆ ರಾಜ್ಯಪಾಲರು ಬರ್ತಾರೆ. ಅದಕ್ಕಾಗಿ ಅವರಿಗೆ ಭೇಟಿಯಾಗಲು ಬಂದಿದ್ದೆ ಎಂದು ತಿಳಿಸಿದರು.

ದ್ವೇಷ ಭಾಷಣ ಬಿಲ್ ಬಗ್ಗೆ ಅಂಗೀಕರಿಸದಂತೆ ಬಿಜೆಪಿ ನಿಯೋಗ ರಾಜ್ಯಪಾಲರ ಭೇಟಿ ವಿಚಾರಕ್ಕೆ, “ನಾವು ಈಗಾಗಲೇ ಗವರ್ನರ್ ಗೆ ತಿಳಿಸಿದ್ದೇವೆ. ಎಲ್ಲಾ ರೀತಿಯಲ್ಲೂ ಕೂಡ ಸ್ಪಷ್ಟನೆ ಕೊಟ್ಟಿದ್ದೇವೆ. ಏನಾದರೂ ಸ್ಪಷ್ಟನೆ ಕೇಳಿದರೆ ಅದನ್ನು ನೀಡುತ್ತೇವೆ ಎಂದು ತಿಳಿಸಿದರು.

- Advertisement - 

ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ವಿಚಾರವಾಗಿ ಮಾತನಾಡಿದ ಸಚಿವ ಪರಮೇಶ್ವರ್, ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರು ಇಬ್ಬರು ಹೋಗ್ತಿದ್ದಾರೆ. ತಮಿಳುನಾಡಿಗೆ ಹೋಗುತ್ತಿರುವ ಸಂದರ್ಭದಲ್ಲಿ ಇವರು ಭೇಟಿಯಾಗ್ತಾರೆ. ಇದು ಸೌಜನ್ಯದ ಭೇಟಿ ಎಂದು ತಿಳಿಸಿದರು.

ನೀವು ರಾಹುಲ್ ಗಾಂಧಿ ಅವರನ್ನು ಭೇಟಿ ಆಗ್ತೀರಾ ಎಂಬ ಪ್ರಶ್ನೆಗೆ ಅವಶ್ಯಕತೆ ಬಂದರೆ ಹೋಗ್ತೇನೆ, ಸುಮ್ ಸುಮ್ನೆ ಯಾಕೆ ಹೋಗಿ ಭೇಟಿಯಾಗಲಿ. ಅವಶ್ಯಕತೆ ಬಂದಾಗ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರನ್ನಾಗಲೀ ಭೇಟಿ ಆಗೋಣ. ಭೇಟಿಯಾಗೋದಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.

ನಾಯಕತ್ವ ಗೊಂದಲಕ್ಕೆ ಬ್ರೇಕ್ ಬೀಳುತ್ತಾ ಎಂಬ ಪ್ರಶ್ನೆಗೆ ಗೊಂದಲವೇ ಇಲ್ಲ, ಎಲ್ಲಿದೆ ಗೊಂದಲ? ಗೊಂದಲವನ್ನು ನೀವು ಸರಿಯಾಗಿ ವ್ಯಾಖ್ಯಾನಿಸಬೇಕು. ಆ ರೀತಿ ಏನು ಇಲ್ಲ ಭೇಟಿ ಮಾಡುತ್ತಾರೆ ಅಷ್ಟೇ ಎಂದು ಗೃಹ ಸಚಿವ ಪರಮೇಶ್ವರ್ ಸಮರ್ಥಿಸಿಕೊಂಡರು.

ಮಹಾತ್ಮ ಗಾಂಧಿ ಸ್ಟೇಡಿಯಂ ಹೆಸರು ಬದಲಾವಣೆ ವಿಚಾರಕ್ಕೆ ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಅವರು, ಮಹಾತ್ಮ ಗಾಂಧಿ ಸ್ಟೇಡಿಯಂ ಹೆಸರನ್ನು ಯಾರಾದರೂ ಬದಲಾವಣೆ ಮಾಡುತ್ತಾರಾ? ನಾವು ಮಹಾತ್ಮ ಗಾಂಧಿಯವರ ಹೆಸರು ಇರಬೇಕು ಅಂತ ನರೇಗಾ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದೇವೆ. ಗಾಂಧಿ ಹೆಸರು ತೆಗೆಯುತ್ತಿದ್ದೇವೆ ಅಂತ ಯಾರಾದರೂ ಹುಚ್ಚರು ಹೇಳಬೇಕು ಅಷ್ಟೇ.

ಅದು ಇಂಡೋರ್ ಕಾಂಪ್ಲೆಕ್ಸ್. ಅಲ್ಲಿನ ಕ್ರೀಡಾಪಟುಗಳು ಪರಮೇಶ್ವರ್ ಅವರ ಹೆಸರಿಡಬೇಕು ಅಂತ ಪತ್ರ ಕೊಟ್ಟಿದ್ದಾರೆ. ಅದು ನನಗೆ ಗೊತ್ತಿರಲಿಲ್ಲ ಮೊನ್ನೆ ನನಗೆ ಹೇಳಿದರು. ನನಗೆ ಅದಕ್ಕೂ ಸಂಬಂಧ ಇಲ್ಲ ನೀವೇ ನೋಡಿಕೊಳ್ಳಿ ಅಂತ ಹೇಳಿದ್ದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ವಿವಾದಕ್ಕೆ ಕಾರಣವಾಗಿರುವ ಕೋಗಿಲು ಬಡಾವಣೆಯ ಸಂತ್ರಸ್ತರ ಪೈಕಿ ಬಾಂಗ್ಲಾದೇಶಿಯರು ಇಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಭೇಟಿ ನಂತರ ಮಾತನಾಡಿದ ಪರಮೇಶ್ವರ ಅವರು, ಕೊಗೀಲು ಬಡಾವಣೆಯಲ್ಲಿ ಬಾಂಗ್ಲಾ ದೇಶಿಯರು ನೆಲೆಸಿದ್ದರು ಎಂಬ ಬಿಜೆಪಿ ಸತ್ಯಶೋಧನ ಸಮಿತಿ ಆರೋಪ ನಿರಾಕರಿಸಿದರು.
ಕೋಗಿಲು ಸಂತ್ರಸ್ತರು ಹಾಗೂ ಅಲ್ಲಿ ವಾಸವಾಗಿದ್ದವರ ಪಟ್ಟಿ ತೆರೆಸಿಕೊಂಡು ನೋಡಿದ್ದೇನೆ. ಅಲ್ಲಿ ಯಾವುದೇ ಬಾಂಗ್ಲಾದವರು ಇಲ್ಲ‌. ಕೋಗಿಲು ಕ್ರಾಸ್‌ನಲ್ಲಿ ಅಕ್ರಮವಾಗಿ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ ಎಂದು ಸಚಿವರು ತಿಳಿಸಿದರು.

ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿಕೊಂಡು ಮನೆ ಪಡೆಯಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚನೆ ಮಾಡಲಾಗಿತ್ತು. ಸೋಮವಾರ ಈ ಸಮಿತಿ ವರದಿಯನ್ನು ಸಲ್ಲಿಸಿದೆ. ವರದಿಯಲ್ಲಿ ಯಾವ ರೀತಿಯಲ್ಲಿ ಅಕ್ರಮವಾಗಿ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂಬ ಬಗ್ಗೆ ಉಲ್ಲೇಖ ಮಾಡಲಾಗಿದೆ. ಆದರೆ ಪರಮೇಶ್ವರ್ ಇದನ್ನು ನಿರಾಕರಿಸಿದರು.

 

Share This Article
error: Content is protected !!
";