ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗೃಹ ಇಲಾಖೆಯ ವೈಫಲ್ಯವನ್ನು ಪ್ರಶ್ನಿಸಿದ್ದಕ್ಕೆ ಒಣ ಪೌರುಷ ತೋರುವ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರೇ, ಈ ನಿಮ್ಮ ಲಜ್ಜೆಗೆಟ್ಟ ಭಂಡತನಕ್ಕೆ ಏನನ್ನಬೇಕು ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಬ್ಯಾಂಕ್‌ದರೋಡೆಗೆ ಪೊಲೀಸರೇ ಬೆಂಬಲ. ಅಕ್ರಮ ಚಿನ್ನ ಕಳ್ಳಸಾಗಾಟಕ್ಕೆ ಖಾಕಿಗಳ ಸಾಥ್. ರಾಜ್ಯದಲ್ಲಿ ಅಕ್ರಮ ಡ್ರಗ್ಸ್‌ಫ್ಯಾಕ್ಟರಿ ಪತ್ತೆ ಹಚ್ಚುವಲ್ಲಿ ಪೊಲೀಸರ ವೈಫಲ್ಯ. ಡ್ರಗ್ಸ್‌ಪೆಡ್ಲರ್‌ಗಳಿಗೆ ಪೊಲೀಸ್‌ಇನ್ಸ್‌ಪೆಕ್ಟರ್‌ನೆರವು. ಲಂಚ ಪಡೆದು ಹರಿಯಾಣದ ಗ್ಯಾಂಗ್‌ಸ್ಟರ್‌ಗಳಿಗೆ ಪೊಲೀಸರಿಂದ ಅಕ್ರಮ ಪಾಸ್‌ಪೋರ್ಟ್.
ಐಪಿಎಲ್‌ಬೆಟ್ಟಿಂಗ್‌ಮತ್ತು ಟಿಕೆಟ್‌ಮಾರಾಟ ದಂಧೆಯಲ್ಲಿ ಪೊಲೀಸರು ಭಾಗಿ. ಲೋಕಾಯುಕ್ತ ಎಸ್ಪಿಯಿಂದಲೇ ವಸೂಲಿ ದಂಧೆ. ಹವಾಲ ದಂಧೆಯಲ್ಲಿ ಪೊಲೀಸರು ಭಾಗಿ ಆಗಿರುವುದರ ದೊಡ್ಡ ಪಟ್ಟಿಯನ್ನು ಬಿಡುಗಡೆ ಮಾಡಿ ಜೆಡಿಎಸ್ ಟೀಕಾಪ್ರಹಾರ ಮಾಡಿದೆ.
ಗೃಹ ಇಲಾಖೆಯ ವೈಫಲ್ಯಗಳ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಛೀಮಾರಿ ಹಾಕಿದ್ದು, ಸುಮಾರು 88 ಪ್ರಕರಣಗಳಲ್ಲಿ ಪೊಲೀಸರೇ ಶಾಮೀಲಾಗಿದ್ದಾರೆ ಎಂದು ಪೊಲೀಸರ ಬಂಡವಾಳ ಬಿಚ್ಚಿಟ್ಟಿದ್ದಾರೆ. ಅಷ್ಟು ಸಾಕಲ್ಲವೇ ಪರಮೇಶ್ವರ್‌ಅವರೇ, ರಾಜ್ಯದ ಗೃಹ ಮಂತ್ರಿಯಾಗಿರುವ ನೀವು ಯಾರಿಗೂ ಜಗ್ಗ ಬೇಡಿ, ಬಗ್ಗ ಬೇಡಿ, ಸಮರ್ಥವಾಗಿ ಗೃಹ ಇಲಾಖೆಯನ್ನು ನಿಭಾಯಿಸಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸುವ ಕೆಲಸವನ್ನು ಮಾಡಿ ಎಂದು ಜೆಡಿಎಸ್ ತಾಕೀತು ಮಾಡಿದೆ.

