ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸತತ 5ನೇ ವರ್ಷ, ಡೆಂಟಲ್ ಕಾಲೇಜ್ ಚೇರ್ಮನ್ ಆಗಿ ಡಾ.ಜೆ.ರಾಜು ಬೇತೂರು ಪಾಳ್ಯರವರು ಮುಂದುವರಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘಕ್ಕೆ ಚಿತ್ರದುರ್ಗ ಜಿಲ್ಲಾ ಒಕ್ಕಗಲಿಗರ ಸಂಘದ ವತಿಯಿಂದ ಆಯ್ಕೆಯಾಗಿದ್ದ ಡಾ. ಜೆ. ರಾಜು ಬೇತೂರು ಪಾಳ್ಯರವರು ಇತ್ತೀಚಿಗೆ ರಾಜ್ಯ ಒಕ್ಕಲಿಗರ ಸಂಘಕ್ಕೆ ನಡೆದ
ನೂತನ ಕಾರ್ಯಕಾರಿ ಸಮಿತಿ ಚುನಾವಣೆಯ ನಂತರ ಸತತ 5ನೇ ವರ್ಷಕ್ಕೆ ರಾಜ್ಯ ಒಕ್ಕಲಿಗರ ಸಂಘದ, ದಂತ ವೈದ್ಯ ಮಹಾವಿದ್ಯಾಲಯದ ಅಧ್ಯಕ್ಷರಾಗಿ ಸತತ 5ನೇ ಬಾರಿಗೆ ಡಾ.ಜೆ.ರಾಜು ಬೇತೂರುಪಾಳ್ಯರವರು ನೇಮಕಗೊಂಡಿದ್ದಾರೆ.
ಇದು ಚಿತ್ರದುರ್ಗ ಜಿಲ್ಲೆಯ ನಮ್ಮ ಸಮುದಾಯಕ್ಕೆ ಸಂದ ಗೌರವವಾಗಿದೆ. ಭಗವಂತ ಇನ್ನೂ ಅವರಿಗೆ ಹೆಚ್ಚಿನ ಸಮಾಜ ಸೇವೆ ಮಾಡುವ ಅವಕಾಶ ನೀಡಲೆಂದು ಹಾಗೂ ಉನ್ನತ ಸ್ಥಾನಮಾನ ಲಭಿಸಲೆಂದು ಡಾ.ಜೆ.ರಾಜು ಅಭಿಮಾನಿ ಬಳಗದ ಆಶಯವಾಗಿದೆ.

