ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಡಾ. ಜೆ. ರಾಜು ಬೇತೂರು ಪಾಳ್ಯ

News Desk
- Advertisement -  - Advertisement - 

​ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಡಾ. ಜೆ. ರಾಜು ಬೇತೂರು ಪಾಳ್ಯ
ಚಂದ್ರವಳ್ಳಿ ನ್ಯೂಸ್, ​ನವದೆಹಲಿ: ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ದೆಹಲಿಯ ಅವರ ಗೃಹ ಕಚೇರಿಯಲ್ಲಿ ವಿಶ್ರಾಂತ ಡೆಪ್ಯೂಟಿ ಕಮಿಷನರ್ ಡಾ. ಜೆ. ರಾಜು ಬೇತೂರು ಪಾಳ್ಯ ಹಾಗೂ ಅವರ ಸ್ನೇಹಿತರ ತಂಡ ಭೇಟಿ ಮಾಡಿ ಮಾತುಕತೆ ನಡೆಸಿತು.

​ಈ ಸೌಹಾರ್ದಯುತ ಭೇಟಿಯ ಸಂದರ್ಭದಲ್ಲಿ, ಸಮಾಜದ ಪ್ರಸ್ತುತ ಸ್ಥಿತಿಗತಿಗಳು ಹಾಗೂ ರಾಜ್ಯದ ಇತ್ತೀಚಿನ ರಾಜಕೀಯ ವಿದ್ಯಾಮಾನಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.

- Advertisement - 

ಸಮಾಜದ ಅಭಿವೃದ್ಧಿಗೆ ಪೂರಕವಾದ ಅಂಶಗಳು ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಕೇಂದ್ರ ಸಚಿವರೊಂದಿಗೆ ತಂಡವು ವಿಚಾರ ವಿನಿಮಯ ಮಾಡಿಕೊಂಡಿತು.

​ಭೇಟಿಯ ವೇಳೆ ಡಾ. ಜೆ. ರಾಜು ಬೇತೂರು ಪಾಳ್ಯ ಮತ್ತು ಅವರ ಆತ್ಮೀಯ ಗೆಳೆಯರು ಉಪಸ್ಥಿತರಿದ್ದರು.

- Advertisement - 

Share This Article
error: Content is protected !!
";