ಜನರ ಆರೋಗ್ಯ ಕುರಿತು  ವೈಶಾಲತೆ ಮೆರೆದ ಸಿಜಿಎಸ್ ಆಸ್ಪತ್ರೆಯ ಸೇವಾಕಾರ್ಯ ಪ್ರಶಂಸನೀಯ: ಡಾ.ಕೆ.ಎಸ್.ರವೀಂದ್ರನಾಥ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಸದೃಢ ಉತ್ತಮ ಆರೋಗ್ಯವನ್ನು ಹೊಂದಿದರೆ ಮಾತ್ರ ಯಾವುದೇ ರೋಗ ನಮ್ಮತ್ತ ಸುಳಿಯಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ದೀಢಿರನೆ ವಯಸ್ಸಿನ ಅಂತರವಿಲ್ಲದೆ ಹೃದಯ ರೋಗಕ್ಕೆ ತುತ್ತಾಗಿ ಮರಣಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೃದಯರೋಗದ ಬಗ್ಗೆ ಅನಗತ್ಯ ಭಯಬೇಡ.

ಹೃದಯರೋಗಕ್ಕೆ ತುತ್ತಾದವರು ವೈದ್ಯರನ್ನು ಸಂಪರ್ಕಿಸಿ ತುರ್ತು ಚಿಕಿತ್ಸೆ ಪಡೆದು ಜೀವವನ್ನು ಸಂರಕ್ಷಿಸಿಕೊಳ್ಳಬಹುದು. ಸಕಾಲಿಕ ಚಿಕಿತ್ಸೆಹೊಂದಿ ಉತ್ತಮ ಜೀವನ ನಡೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ, ರಾಜೀವಗಾಂಧಿ ಆರೋಗ್ಯವಿಜ್ಞಾನಿಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಎಸ್.ರವೀಂದ್ರನಾಥ ತಿಳಿಸಿದರು.

- Advertisement - 

ಅವರು, ಭಾನುವಾರ ಗ್ರಾಮಕಚೇರಿ ಬಳಿ ಇರುವ ಸಿಜಿಎಸ್ ಆಸ್ಪತ್ರೆ ಸಭಾಂಗಣದಲ್ಲಿ ಉಚಿತ ಹೃದ್ರೋಗ ತಪಾಸಣಾ ಶಿಬಿರ ಹಾಗೂ ಮಧುಮೇಹ ಸಲಹಾಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಹೃದಯರೋಗದ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಆಂತಕವನ್ನು ನಿವಾರಣೆ ಮಾಡುವ ದೃಷ್ಠಿಯಿಂದ ನಿಮಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಪ್ರತಿನಿತ್ಯವೂ ಬೆಂಗಳೂರಿನ ಆಸ್ಪತ್ರೆಯಲ್ಲಿ ನೂರಾರು ಸಂಖ್ಯೆಯ ಹೃದಯ ರೋಗಿಗಳು ತಪಾಸಣೆಗೆ ಒಳಗಾಗುತ್ತಿದ್ಧಾರೆ. ಭಯಭೀತರಾಗದೆ ಉತ್ಸಾಹದಿಂದಲೇ ಎಲ್ಲವನ್ನೂ ಎದುರಿಸುವ ಆತ್ಮವಿಶ್ವಾಸಪಡೆಯಬೇಕೆಂದರು.

ಮಧುಮೇಹ ಮತ್ತು ಜೀವನಶೈಲಿ ಬಗ್ಗೆ ಮಾತನಾಡಿದ ಡಾ.ಆರ್.ಮುದ್ದುರಂಗಪ್ಪ, ಇತ್ತೀಚಿನ ದಿನಗಳ ಸಮೀಕ್ಷೆ ಪ್ರಕಾರ ಸಕ್ಕರೆಕಾಯಿಲೆ ಹೆಚ್ಚು ವ್ಯಾಪಿಸಿರುವುದೇ ಭಾರತದಲ್ಲಿ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಕ್ಕರೆಕಾಯಿಲೆ ಹರಡುವುದು ಕಡಿಮೆ. ಸಕ್ಕರೆಕಾಯಿಲೆ ಅಂಟುರೋಗವಲ್ಲ, ಸಕ್ಕರೆ ಅಂಶ ದೇಹದಲ್ಲಿ ಹೆಚ್ಚಾದಾಗ ಮಾತ್ರ ತೊಂದರೆ ಆರಂಭವಾಗಲಿದೆ, ಸಕಾಲಿನ ಚಿಕಿತ್ಸೆಯಿಂದ ನಿಯಂತ್ರಿಸಬಹುದು ಎಂದರು.

- Advertisement - 

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಮಾತನಾಡಿ, ಸಿಜಿಎಸ್.ಆಸ್ಪತ್ರೆಯ ಡಾ.ಸಿ.ಶಿವಲಿಂಗಪ್ಪ ಮತ್ತು ಕುಟುಂಬ ವರ್ಗ ಜನಪರ ಕಾಳಜಿಯನ್ನು ಹೊಂದಿದಕುಟುಂಬವಾಗಿದೆ. ಕಾರಣ, ಸಕ್ಕರೆ ಕಾಯಿಲೆ ಮತ್ತು ಹೃದಯ ರೋಗದ ಬಗ್ಗೆ ಉಚಿತ ತಪಾಸಣಾ ಶಿಬಿರ ಹಮ್ಮಿಕೊಂಡು ನುರಿತ ವೈದ್ಯರನ್ನು ಕರೆಸಿ ತಪಾಸಣೆ ಮಾಡಲಾಗಿದೆ.

ರಾಜ್ಯದ ಹೃದಯರೋಗಕ್ಕೀಡಾದವರ ಲಕ್ಷಾಂತರ ಜನಕ್ಕೆ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿದ ಡಾ.ಕೆ.ಎಸ್.ರವೀಂದ್ರನಾಥರವರಿಗೆ ಸನ್ಮಾನದ ಜೊತೆಗೆ ವೈದ್ಯ ಚಿನ್ಮಯಿ ಬಿರುದನ್ನು ನೀಡಲಾಗಿದೆ. ಅದೇ ರೀತಿ ಮುದ್ದುರಂಗಪ್ಪನವರಿಗೆ ವೈದ್ಯಶ್ರೀ, ಡಾ.ಎಚ್.ಎಂ.ಹನುಮಂತರಾಯ ಮತ್ತು ಡಾ.ಎಸ್.ಜಯಮ್ಮನವರಿಗೆ ವೈದ್ಯರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ನನಗೂ ಸಹ ಅಭಿವೃದ್ದಿಶಿಲ್ಪಿ ಬಿರುದು ನೀಡಿದ ಗೌರವಿಸಲಾಗಿದೆ. ಕ್ಷೇತ್ರದ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ವೈದ್ಯರೂ ಸೇರಿದಂತೆ ಎಲ್ಲರೂ ಮೆಚ್ಚುಗೆ ಮಾತುಗಳನ್ನಾಡಿದ್ಧಾರೆ. ಮುಂದಿನ ದಿನಗಳಲ್ಲೂ ಜನರ ಪ್ರೀತಿ, ವಿಶ್ವಾಸಕ್ಕೆ ದಕ್ಕೆಉಂಟಾಗದಂತೆ ಕಾರ್ಯನಿರ್ವಹಿಸುವ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಡಾ.ಕೆ.ಎಸ್.ರವೀಂದ್ರನಾಥರವರ ಸೇವಾಕಾರ್ಯದ ಬಗ್ಗೆ ಅಭಿನಂದನ ಗ್ರಂಥ ಸ್ಪಂದನ ಬಿಡುಗಡೆಯಾಗಿದ್ದು, ಸಂಪಾದಕತ್ವ ವಹಿಸಿದ್ದ ಬಿ.ತಿಪ್ಪಣ್ಣಮರಿಕುಂಟೆ, ಡಾ.ಪ್ರಾಣೇಶ್‌ಗುಂಡು, ಡಾ.ಜಿ.ಶರಣಪ್ಪ, ಜಾನಪದ ವಿದ್ವಾಂಸ ಡಾ.ಮೀರಸಾಬಿಹಳ್ಳಿಶಿವಣ್ಣ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ರಾಂತ ಪ್ರಾಂಶುಪಾಲ ಡಾ.ಸಿ.ಶಿವಲಿಂಗಪ್ಪ, ಹೃದಯರೋಗ ತಜ್ಞ ಡಾ.ಕೆ.ಎಸ್.ರವೀಂದ್ರನಾಥ ನಮ್ಮ ಜಿಲ್ಲೆಯವರೇ ಈ ಭಾಗದ ಹೃದಯರೋಗಿಗಳಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಬಂದಿದ್ಧಾರೆ. ಎಲ್ಲಾ ವೈದ್ಯರು ಉಚಿತ ತಪಾಸಣಾ ಶಿಬಿರ ನಡೆಸಿ ನೂರಾರು ರೋಗಿಗಳಿಗೆ ಮಾರ್ಗದರ್ಶನ ನೀಡಿದ್ಧಾರೆ. ಸಿಜಿಎಸ್ ಆಸ್ಪತ್ರೆ ಸೇವಾಕಾರ್ಯಕ್ಕೆ ಎಲ್ಲರಿಗೂ ಮೆಚ್ಚುಗೆ ವ್ಯಕ್ತವಾಗಿದೆ.

ಡಾ.ಎಸ್.ಜಯಂತ್, ಡಾ.ಆರ್.ಪೂಜಾ, ಡಾ.ಆದಿವಿಶ್ವನಾಥಗುಪ್ತ, ಎಂ.ಆರ್.ರೇವಣ್ಣ, ನೇರಲಗುಂಟೆರಾಮಣ್ಣ, ನಗರಸಭೆ ಅಧ್ಯಕ್ಷೆ ಶಿಲ್ಪಮುರುಳಿ, ಸ್ಥಾಯಿಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ್, ಸದಸ್ಯರಾದ ಕವಿತಾವೀರೇಶ್, ಸುಮಭರಮಯ್ಯ, ಆರ್.ಮಂಜುಳಾ, ಸುಜಾತ, ಬಿ.ಟಿ.ರಮೇಶ್‌ಗೌಡ, ಕೆ.ವೀರಭದ್ರಪ್ಪ ಮುಂತಾದವರು ಸಹಕಾರ ಅಭಿನಂದನೀಯವೆಂದರು.

 

Share This Article
error: Content is protected !!
";