ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತದಲ್ಲಿ ಹಲವು ಮಹತ್ತರ ಬದಲಾವಣೆಗಳು ನಡೆದಿದ್ದವು ಎಂದು ಕಾಂಗ್ರೆಸ್ ತಿಳಿಸಿದರೆ.
ಡಾ. ಸಿಂಗ್ ಅವರ ಅವಧಿಯ ಆರ್ಥಿಕ ಸುಧಾರಣೆಗಳು ಭಾರತವನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಆ ಸಮಯದಲ್ಲಿ ಆರಂಭವಾದ ಸ್ಟಾರ್ಟ್‌ಅಪ್‌ಗಳು ಜನರ ಜೀವನಶೈಲಿಯನ್ನು ಸರಳಗೊಳಿಸುತ್ತಾ, ಹೊಸ ತಂತ್ರಜ್ಞಾನಗಳ ಮೂಲಕ ಅಸಾಧ್ಯವೆನಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿವೆ ಎಂದು ಕಾಂಗ್ರೆಸ್ ಮೆಚ್ಚುಗೆ ವ್ಯಕ್ತಪಡಿಸಿದೆ.
ಬ್ಯಾಂಕಿಂಗ್, ಸಂವಹನ, ಶಾಪಿಂಗ್, ಮತ್ತು ಊಟದ ಆರ್ಡರ್‌ಗಳಿಂದ ಹಿಡಿದು, ಶಿಕ್ಷಣ, ಆರೋಗ್ಯ, ಮತ್ತು ವಾಹನ ಸೇವೆಗಳ ಸ್ಟಾರ್ಟ್‌ಅಪ್ಗಳು ನಮ್ಮ ದಿನನಿತ್ಯದ ಜೀವನದ ಭಾಗವಾಗಿವೆ. ಇದು ದೇಶದ ಆರ್ಥಿಕ ಪ್ರಗತಿಗೆ ಕಾರಣವಾಯಿತು ಎಂದು ಕಾಂಗ್ರೆಸ್ ತಿಳಿಸಿದೆ.