ಭಾರತ ಸೇವಾ ರತ್ನ ಪ್ರಶಸ್ತಿಗೆ ಭಾಜನರಾದ ಡಾ.ಮನೋಜಿತ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಕರ್ನಾಟಕ ಪ್ರೆಸ್ ಕ್ಲಬ್ ಪ್ರತಿ ವರ್ಷವು ನಾಡಿನ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಪ್ರಶಸ್ತಿ ನೀಡುತ್ತಾ ಬಂದಿರುತ್ತದೆ.

೨೦೨೫ನೇ ಸಾಲಿನ ಸಾಧಕರ ಸಮಾಗಮ ಕಾರ್ಯಕ್ರಮವು ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮದಲ್ಲಿ ೨೦೨೬ನೇ ಜನವರಿ ೧೩ ರಂದು ಸಂಜೆ ೪.೩೦ ಗಂಟೆಗೆ ರಾಜ್ಯದ ಗಣ್ಯರ ವೇದಿಕೆಯಲ್ಲಿ ನಡೆಯಲಿದ್ದು,

- Advertisement - 

ಈ ಕಾರ್ಯಕ್ರಮದಲ್ಲಿ ನಾಡಿನ ೧೧ ಸಾಧಕರಿಗೆ ಭಾರತ ಸೇವಾ ರತ್ನ ಪ್ರಶಸ್ತಿಯನ್ನು ಪವಾಡ ಶ್ರೀ ಬಸವಣ್ಣ ದೇವರ ಮಠದ ಪೀಠಾದ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ವಿರೋಧ ಪಕ್ಷದ ಮುಖಂಡರಾದ  ಆರ್.ಅಶೋಕ ಮತ್ತು ಲೋಕಸಭಾ ಸದಸ್ಯರಾದ ಪಿ.ಸಿ ಮೋಹನ ಸೇರಿದಂತೆ ಹಲವಾರು ಮುಖ್ಯ ಅತಿಥಿಗಳ ಅಮೃತ ಹಸ್ತದಿಂದ ವಿತರಿಸಲಾಗುತ್ತದೆ.

ರಾಜ್ಯದ ಸಾಧಕ ರತ್ನಗಳಲ್ಲಿ ಒಂದಾಗಿ ಡಾ.ಮನೋಜಿತ್ ಎಸ್.ಎಸ್ ರವರು ಬೆಂಗಳೂರು ನಗರದಲ್ಲಿ ೧೯೮೮ರಲ್ಲಿ ಜನಿಸಿ ಎಂ.ಬಿ.ಬಿ.ಎಸ್,.ಎಸ್ ಅಧ್ಯಯನ ಮುಗಿಸಿ ಉನ್ನತ ತರಬೇತಿ ಪಡೆದು ಹಲವಾರು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

- Advertisement - 

 ಇಲ್ಲಿಯವರೆಗೆ ೧೫೦೦೦ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆಗಳನ್ನು ಮಾಡಿ ರೋಗಿಗಳ ಪ್ರಾಣ ಉಳಿಸಿದ್ದಾರೆ. ಅತ್ಯಂತ ನುರಿತ ಶಸ್ತ್ರ ಚಿಕಿತ್ಸಕರಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಖ್ಯಾತಿಗಳಿಸಿದ್ದಾರೆ.ವೈಧ್ಯಕೀಯ ಸೇವೆ ಮತ್ತು ವೃತ್ತಿ ಅನುಭವಕ್ಕಾಗಿ  ಕರ್ನಾಟಕ ಪ್ರೆಸ್ ಕ್ಲಬ್‌ನ ಭಾರತ ಸೇವಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಆಯ್ಕೆಯನ್ನು ಕರ್ನಾಟಕ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

 

 

Share This Article
error: Content is protected !!
";