ದುರ್ಗಾಂಬಿಕಾ ದೇವಿಗೆ ಪೂಜೆ ಸಲ್ಲಿಸಿದ ಡಾ.ಪ್ರಭಾ ಮತ್ತು ಮಲ್ಲಿಕಾರ್ಜುನ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ … ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ದಾವಣಗೆರೆ ನಗರದ ಆರಾಧ್ಯ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವದ
ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮತ್ತು ಪತಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಪ್ರತಿ ಎರಡು ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ನಡೆಯುವ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವ ಈ‌ಬಾರಿಯೂ‌ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿರುವುದು‌ಸಂತೋಷದ ಸಂಗತಿಯಾಗಿದೆ.

- Advertisement - 

ದೇವಿಯ ಕೃಪೆಯಿಂದ ರಾಜ್ಯಕ್ಕೆ ಮತ್ತು ದಾವಣಗೆರೆಗೆ ಸುಖ, ಸಮೃದ್ಧಿ, ಆರೋಗ್ಯ ಮತ್ತು ಶಾಂತಿ ಲಭಿಸಲಿ ಎಂದು ಡಾ.ಪ್ರಭಾ ಹಾರೈಸಿದರು.

- Advertisement - 

ಜಾತ್ರಾ ಮಹೋತ್ಸವವು ಎಲ್ಲರ ಜೀವನದಲ್ಲಿ ಹೊಸ ಶಕ್ತಿ ಮತ್ತು ಸಕಾರಾತ್ಮಕತೆಯನ್ನು ತುಂಬಲಿ. ಶ್ರೀ ದುರ್ಗಾಂಭಿಕಾ ದೇವಿ ಎಲ್ಲರನ್ನೂ ರಕ್ಷಿಸಲಿ ಎಂದು ದುರ್ಗಮ್ಮ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.

 

Share This Article
error: Content is protected !!
";