ಮೈಲಾರ ಬಸವಲಿಂಗ ಶರಣಶ್ರೀ ರಾಜ್ಯ ಪ್ರಶಸ್ತಿಗೆ ಡಾ. ರಾಜೇಂದ್ರ. ಟಿ. ಎಲ್.ತಲ್ಲೂರು ಆಯ್ಕೆ 

News Desk

ಚಂದ್ರವಳ್ಳಿ ನ್ಯೂಸ್, ಹೂವಿನ ಹಡಗಲಿ:
ಕರ್ನಾಟಕ ಗ್ರಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಯಾ ಸಮಿತಿ ಹೂವಿನ ಹಡಗಲಿ  ಸುಕ್ಷೇತ್ರ ಮೈಲಾರ ವಿಜಯನಗರ ಅವತಿಯಿಂದ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಅಂಗವಾಗಿ ಕರ್ನಾಟಕ ಗ್ರಾಮೀಣ ಕನ್ನಡ ನುಡಿ ಹಬ್ಬ – 2025.ರ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ ಕಾರ್ಯಕ್ರಮದಲ್ಲಿ

ಶಿವಮೊಗ್ಗ  ಜಿಲ್ಲೆಯ ಸೊರಬ ತಾಲ್ಲೂಕಿನ ತಲ್ಲೂರು ಗ್ರಾಮದ ಡಾ.ರಾಜೇಂದ್ರ ಟಿ.ಎಲ್. ತಲ್ಲೂರು ಇವರಿಗೆ 2025 ನೇ ಸಾಲಿನ ಮೈಲಾರ ಬಸವಲಿಂಗ ಶ್ರೀ ರಾಜ್ಯ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪುಟ್ಟಪ್ಪ ಶ  ತಂಬೂರಿ ತಿಳಿಸಿದ್ದಾರೆ.  ಡಾ.ರಾಜೇಂದ್ರ ಟಿ.ಎಲ್. ತಲ್ಲೂರು ಅವರು ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ.

- Advertisement - 

ಇವರು ಅನೇಕ ಕವಿಗೋಷ್ಠಿ ಉಪನ್ಯಾಸಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ  ಮತ್ತು ಇತ್ತೀಚಿಗೆ ಬಿಡುಗಡೆಯಾದ ಕರ್ನಾಟಕ ನಕ್ಷತ್ರಗಳು ಪುಸ್ತಕದಲ್ಲಿ ಸಾಧಕರ  ಸಂಕಲನದ ಪಟ್ಟಿಯಲ್ಲಿ ಹಾಗೂ ಕುಂದ ಕಾವ್ಯ ಭಾಗ-1 ಮತ್ತು  ಕಾವ್ಯೋತ್ಸವ ಕವನ ಸಂಕಲನದಲ್ಲಿ ಹಾಗೂ ಕರುನಾಡ ಸಾಧಕರು ಸಂಕಲನದಲ್ಲಿ ಇವರು ಕೂಡ ಗುರುತಿಸಿಕೊಂಡಿದ್ದಾರೆ.

ತಲ್ಲೂರು ಅವರು ಸದಾ ಕ್ರಿಯಶೀಲರಾಗಿದ್ದು ಇದುವರೆಗೂ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ಹಾಗೂ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮತ್ತು ಏಷಿಯನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಮತ್ತು ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯನ್ನು ಸಹ  ಮಾಡಿದ್ದಾರೆ. ಇದರ ಜೊತೆಗೆ ಅನೇಕ ಸನ್ಮಾನಗಳು, ಪ್ರಶಸ್ತಿಗಳು ಇವರನ್ನು ಅರಸಿ  ಬಂದಿವೆ. ಅನೇಕ ಸಂಘ ಸಂಸ್ಥೆಗಳಲ್ಲಿ ಸಂಘಟನಾತ್ಮಕ ಕಾರ್ಯದಲ್ಲಿ ತೋಡಿಗಿಸಿಕೊಂಡಿದ್ದಾರೆ.

- Advertisement - 

ತಲ್ಲೂರು ಅವರ ಪ್ರತಿಭೆ ಗುರುತಿಸಿ ಪ್ರದಾನ  ಮಾಡಲಾಗುವುದು ಎಂದು ಸಂಸ್ಥೆ ಅಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ  ತಿಳಿಸಿದ್ದಾರೆ.

Share This Article
error: Content is protected !!
";