ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೊಡ್ಡದಾದ ಬಿಲ್ವಪತ್ರೆ ನೀಲಕಂಠೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತಿದ್ದು ವಿಶೇಷವಾಗಿತ್ತು ಹೌದು ಯುಗಾದಿ ಹಬ್ಬದ ಪ್ರಯುಕ್ತ
ಚಿತ್ರದುರ್ಗ ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳು ಮತ್ತು ಅಲಂಕಾರಗಳನ್ನು ಏರ್ಪಡಿಸಲಾಗಿತ್ತು.
ಚಿತ್ರದುರ್ಗದ ನಗರದ ಕಣ್ಣುಮಪ್ಪ ಲೇಔಟಿನ ಕಲಾವಿದ ಇನ್ ದುರ್ಗ ಖ್ಯಾತಿಯ ಡಾ.ರುಜುತ್.ಸಿ.ಕೆ ಇವರ ಮನೆಯ ಆವರಣದಲ್ಲಿ ಬೆಳದ ಬೃಹತ್ ಆಕಾರದ ಸುಮಾರು 8 ಇಂಚು ಉದ್ದ 5 ಇಂಚು ಅಗಲದ ಬಿಲ್ವ ಪತ್ರೆಯನ್ನು ದೇವರಿಗೆ ಸಮರ್ಪಸಲಾಯಿತು. ದೇವಸ್ಥಾನಕ್ಕೆ ಬಂದಂತಹ ಭಕ್ತವೃಂದರಲ್ಲಿ ಆಕರ್ಷಣೀಯವಾಗಿ ಕಣ್ಮನ ಸೆಳೆಯಿತು.