ಯುಪಿಎಸ್ಸಿಯಲ್ಲಿ 41ನೇ ರ್ಯಾಂಕ್ ಪಡೆದ ಕೋಡಿಯಾಲ ಹೊಸಪೇಟೆ ನಿವಾಸಿ ಡಾ.ಸಚಿನ್

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಕೇಂದ್ರ ಲೋಕಸೇವಾ ಆಯೋಗವು 2024ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಅಂತಿಮ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು ಹಾವೇರಿ ಜಿಲ್ಲೆಯ ಸಚಿನ್​ ಬಸವರಾಜ ಗುತ್ತೂರ್​ ಅವರು ಉತ್ತಮ ಸಾಧನೆ ಮಾಡಿಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ರ್ಯಾಂಕಿಂಗ್​ನಲ್ಲಿ 41ನೇ ಸ್ಥಾನ ಪಡೆದಿರುವ 29 ವರ್ಷದ ಸಚಿನ್​ ಅವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ನಿವಾಸಿಯಾಗಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿರುವ ಸಚಿನ್ ಗುತ್ತೂರ್​ ಅವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಹರಿಹರದಲ್ಲಿ ಪ್ರಾಥಮಿಕ ಶಿಕ್ಷಣ, ದಾವಣಗೆರೆಯಲ್ಲಿ ಉನ್ನತ ವಿದ್ಯಾಭ್ಯಾಸ ಮುಗಿಸಿದ್ದಾರೆ.

 

Share This Article
error: Content is protected !!
";