ವಿಯೆಟ್ನಾಂ ಸಮ್ಮೇಳನಕ್ಕೆ ಡಾ.ಶಶಿಧರ, ಡಾ.ಪಾಳೇದ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ವಿಯೆಟ್ನಾಂ
ದೇಶದ ಟೈನ್ ಜಿಯಾಂಗ್ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ 17 ರಿಂದ 19ರ ವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ.ಆರ್.ಶಶಿಧರ ಮತ್ತು ಡಾ.ಅಶೋಕಕುಮಾರ ಪಾಳೇದ ಅವರು ಸಂಶೋಧನಾ ಪ್ರಬಂಧ ಮಂಡನೆ ಮಾಡಲಿದ್ದಾರೆ.

ಸಮ್ಮೇಳನದಲ್ಲಿ ೪೦ಕ್ಕೂ ಹೆಚ್ಚು ದೇಶಗಳ ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ. ಡಾ.ಶಶಿಧರ ಅವರು ವ್ಯವಹಾರ ನಿರ್ವಹಣೆ ವಿಷಯದಲ್ಲಿ ಹಾಗೂ ಡಾ.ಅಶೋಕಕುಮಾರ ಪಾಳೇದ ಅವರು ರಾಜ್ಯಶಾಸ್ತç ವಿಷಯದಲ್ಲಿ ಸಂಶೋಧನಾ ಪ್ರಬಂಧ ಮಂಡಿಸುವರು.

ಹಿನ್ನೆಲೆಯಲ್ಲಿ ಇಬ್ಬರೂ ಪ್ರಾಧ್ಯಾಪಕರು ಬೆಂಗಳೂರು ಮೂಲಕ ವಿಯಟ್ನಾಂ ದೇಶಕ್ಕೆ ತೆರಳಿದರು. ಇದೇ ಸಂದರ್ಭದಲ್ಲಿ ಅಕ್ಟೋಬರ್ ೨೧ ಮತ್ತು ೨೨ರಂದು ಕಾಂಬೋಡಿಯದ ನ್ಯಾಷನಲ್ ಯುನಿವರ್ಸಿಟಿ ಆಫ್ ಮ್ಯಾನೇಜ್ಮೆಂಟ್ ಹಾಗೂ ಲಾವೋಸ್ ನ್ಯಾಷನಲ್ ಯುನಿವರ್ಸಿಟಿ ಆಫ್ ಲಾವೋಸ್ ಆಹ್ವಾನದ ಮೇರೆಗೆ ಉಪನ್ಯಾಸ ನೀಡಲಿದ್ದಾರೆ.

ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ, ಕುಲಸಚಿವ ಪ್ರೊ.ಯು.ಎಸ್.ಮಹಾಬಲೇಶ್ವರ, ಪರೀಕ್ಷಾಂಗ ಕುಲಸಚಿವ ಪ್ರೊ.ರಮೇಶ ಅವರು ಡಾ.ಶಶಿಧರ ಮತ್ತು ಡಾ.ಅಶೋಕಕುಮಾರ ಅವರನ್ನು ಅಭಿನಂದಿಸಿ, ಬೀಳ್ಕೊಟ್ಟರು.

 

- Advertisement -  - Advertisement -  - Advertisement - 
Share This Article
error: Content is protected !!
";