ರೈಲು ನಿಲ್ದಾಣಕ್ಕೆ ಡಾ.ಶಿವಬಸವ ಸ್ವಾಮೀಜಿ ಹೆಸರು ಶಿಫಾರಸು

News Desk


ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ನಾಗನೂರು ರುದ್ರಾಕ್ಷಿಮಠದ ಲಿಂಗೈಕ್ಯ ಶತಾಯುಷಿ ಡಾ.ಶಿವಬಸವ ಸ್ವಾಮೀಜಿ ಅವರ ಹೆಸರನ್ನು ಬೆಳಗಾವಿ ರೈಲು ನಿಲ್ದಾಣಕ್ಕಿಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದ್ದು ಜಿಲ್ಲೆಯ ಜನರ ಸಂತಸಕ್ಕೆ ಕಾರಣವಾಗಿದೆ.

ರಾಮದುರ್ಗ ತಾಲೂಕಿನ ಹಿರೇಕೊಪ್ಪ ಗ್ರಾಮದ ಅಡಿವಯ್ಯ ಮತ್ತು ರುದ್ರಮ್ಮನವರ ಕಿರಿಯ ಸುಪುತ್ರರಾಗಿ ಶಿವಬಸವ ಸ್ವಾಮೀಜಿ 1889ರ ಡಿಸೆಂಬರ್ 8ರಂದು ಜನಿಸಿದರು.
ಶಿವಬಸವ ಸ್ವಾಮೀಜಿ ತಂದೆಯವರದ್ದು ಮೂಲತಃ ಬೈಲಹೊಂಗಲ ತಾಲೂಕಿನ ನಾಗನೂರು. ಇಲ್ಲಿನ ರುದ್ರಾಕ್ಷಿಮಠದ
6ನೇ ಪೀಠಾಧಿಪತಿಗಳಾಗಿದ್ದ ವೀರಭದ್ರಸ್ವಾಮಿಗಳು ಲಿಂಗೈಕ್ಯರಾದರು. ಮುಂದೆ 8 ವರ್ಷದ ಬಾಲಕರಾಗಿದ್ದ ಶಿವಬಸವ 1907ರಲ್ಲಿ ನಾಗನೂರು ರುದ್ರಾಕ್ಷಿಮಠದ 7ನೇ ಪೀಠಾಧಿಪತಿಗಳಾಗಿ ಆಯ್ಕೆಯಾದರು.

- Advertisement - 

1908ರಲ್ಲಿ ಹುಬ್ಬಳ್ಳಿಯ ರುದ್ರಾಕ್ಷಿಮಠದಲ್ಲಿ ಆಗಿನ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಆಶ್ರಯದಲ್ಲಿ ಇದ್ದುಕೊಂಡು ವೇದ, ಸಂಸ್ಕೃತ ಸೇರಿ ವಚನಾಧ್ಯಯನ ಪೂರ್ಣಗೊಳಿಸಿದರು.
ಇದೇ ಸಂದರ್ಭದಲ್ಲಿ ಸದ್ಗುರು ಸಿದ್ಧಾರೂಢರ ಪ್ರವಚನವನ್ನು ಆಲಿಸಿದರು. ಅಲ್ಲಿಂದ ಶಿವಬಸವ ಮರಿದೇವರು
1910ರಲ್ಲಿ ಶಿವಯೋಗಮಂದಿರಕ್ಕೆ ತೆರಳಿ ಹಾನಗಲ್ ಕುಮಾರಸ್ವಾಮಿಗಳ ಮಾರ್ಗದರ್ಶನದಲ್ಲಿ ಹನ್ನೆರಡು ವರ್ಷ ಅಧ್ಯಯನ ಮಾಡಿ ತಮ್ಮ ನಯ, ವಿನಯ, ಸರಳ-ಸಜ್ಜನಿಕೆಗಳಿಂದ ಪೂಜ್ಯರ ಕೃಪಾಶೀರ್ವಾದದಲ್ಲಿ ತಯಾರಾದರು.

ನಂತರ 1922ರಂದು ನಾಗನೂರಿಗೆ ಬಂದ ಸ್ವಾಮೀಜಿ ನೋಡ ನೋಡುತ್ತಿದ್ದಂತೆ ಜನಸಾಮಾನ್ಯರ ಸ್ವಾಮೀಜಿಯಾಗಿ ಬೆಳೆದರು. ಸುದೀರ್ಘ 72 ವರ್ಷಗಳ ಕಾಲ ರುದ್ರಾಕ್ಷಿಮಠವನ್ನು ಹೆಮ್ಮರವಾಗಿ ಬೆಳೆಸಿ, ಸೆ.9 1994ರಂದು ಡಾ.ಶಿವಬಸವ ಸ್ವಾಮೀಜಿ ಲಿಂಗೈಕ್ಯರಾದರು.

- Advertisement - 

ಡಾ.ಶಿವಬಸವ ಸ್ವಾಮೀಜಿ ಬೆಳಗಾವಿಯಲ್ಲಿ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದವರು. ವಿಶ್ವಗುರು ಬಸವಣ್ಣನವರ ಕಾಯಕ, ದಾಸೋಹ ತತ್ವವನ್ನು ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದವರು.
ಬೆಳಗಾವಿ ಜಿಲ್ಲೆಯ ಗಡಿಯಲ್ಲಿ ಕನ್ನಡ ಗಟ್ಟಿಗೊಳಿಸಿದ
ಕನ್ನಡ ಗುರು‘, ಕಾಯಕ, ದಾಸೋಹ ತತ್ವದ ಹರಿಕಾರ, ಸಾವಿರಾರು ಮಕ್ಕಳಿಗೆ ಅನ್ನ, ಅಕ್ಷರ ಕೊಟ್ಟ ಮಹಾದಾನಿ ಒಂದೆಡೆ ಸ್ವಾತಂತ್ರ್ಯ ಹೋರಾಟಗಾರರಿಗೆ ಅನ್ನ, ಆಶ್ರಯ ನೀಡಿ ರಕ್ಷಣೆ ನೀಡಿದ್ದರೆ, ಮತ್ತೊಂದೆಡೆ ಕರ್ನಾಟಕ‌ದ ಏಕೀಕರಣದಲ್ಲೂ ಅವರ ಕೊಡುಗೆ ಅಪ್ರತಿಮ. ಬೆಳಗಾವಿ ಕರ್ನಾಟಕದಲ್ಲಿ ಉಳಿಯಲು ಡಾ.ಶಿವಬಸವ ಸ್ವಾಮೀಜಿ ಕಾರಣ ಎನ್ನುವುದು ಇಲ್ಲಿ ಜನಜನಿತ.

Share This Article
error: Content is protected !!
";