ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿಯಾಗಿ ಡಾ.ಸೌಮ್ಯ ನೇಮಕ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರು ಗ್ರಾಮಾಂತರ ಜಿಲ್ಲೆ
   2026ರ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಉಸ್ತುವರಿಯಾಗಿ ಡಾ.ಸೌಮ್ಯ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಪದವೀಧರರ ವಿಭಾಗ)ನೇಮಿಸಿ ಆದೇಶ ಹೊರಡಿಸಿದೆ.

ಮುಂಬರುವ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಕೆಪಿಸಿಸಿ ಪದವೀಧರರ ವಿಭಾಗದ ವತಿಯಿಂದ ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿ ಕೆಪಿಸಿಸಿ ಮುಖ್ಯ ವಕ್ತಾರರು ಹಾಗೂ ಕೆಪಿಸಿಸಿ ಪದವೀಧರ ವಿಭಾಗದ ಅಧ್ಯಕ್ಷ ಎ ಎನ್ ನಟರಾಜ್ ಗೌಡ ಉಸ್ತುವಾರಿಗಳ ಪಟ್ಟಿಗೆ ಅನುಮೋದನೆ ನೀಡುವಂತೆ ಕೋರಿ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ರವಾನಿಸಿದ್ದಾರೆ.

- Advertisement - 

2026ರಲ್ಲಿ ನಡೆಯುವ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದ ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪದವೀಧರರ ವಿಭಾಗದ ಪದಾಧಿಕಾರಿಗಳನ್ನು ವಿವಿಧ ಜಿಲ್ಲೆಗಳಿಗೆ ಉಸ್ತುವಾರಿಗಳನ್ನಾಗಿ ಆಯ್ಕೆ ಮಾಡಿದ್ದು ಸದರಿ ಪದಾಧಿಕಾರಿಗಳು ತಮಗೆ ವಹಿಸಲಾಗಿರುವ ಕ್ಷೇತ್ರದಲ್ಲಿ ಪಕ್ಷದ ಮುಖಂಡರುಗಳ ಸಹಯೋಗದೊಂದಿಗೆ ಮತದಾರರ ಪಟ್ಟಿಗೆ ಸದಸ್ಯತ್ವವನ್ನು ನೋಂದಣಿ ಮಾಡಿಸಲು ಕ್ರಮವಹಿಸುವಂತೆ ನಿರ್ದೇಶಿಸಲಾಗಿದೆ. ಆದ್ದರಿಂದ ತಾವು ದಯಮಾಡಿ ಈ ಆಯ್ಕೆ ಪಟ್ಟಿಗೆ ಅನುಮೋದನೆ ನೀಡುವಂತೆ ತಮ್ಮಲ್ಲಿ ವಿನಂತಿಸುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. 

ಉಸ್ತುವಾರಿಗಳ ಪಟ್ಟಿ ಇಂತಿದೆ:
ಭರತ್ ಬೆಂಗಳೂರು ಉತ್ತರ, ಪ್ರಶಾಂತ್ ಬೆಂಗಳೂರು ದಕ್ಷಿಣ, ವೆಂಕಟೇಶ್ ಬೆಂಗಳೂರು ಕೇಂದ್ರ, ಶಿಕಂದರ್ ಬೆಂಗಳೂರು ಪೂರ್ವ, ಮದೂಸೂದನ ಬೆಂಗಳೂರು ಪಶ್ಚಿಮ, ಡಾ. ಸೌಮ್ಯ ಬೆಂಗಳೂರು ಗ್ರಾಮಾಂತರ, ಎನ್ ಶೋಭಾ ರಾಮನಗರ.

- Advertisement - 

ಈ ಕುರಿತು ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಡಾ. ಸೌಮ್ಯ ಮಾತನಾಡಿ ನನ್ನ ಮೇಲೆ ಭರವಸೆ ಇಟ್ಟು ನನಗೆ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆಯಿಂದ ನಿಭಾಯಿಸುತ್ತೇನೆ . ನನ್ನನ್ನು ನೇಮಕ ಮಾಡಿದ ರಾಜ್ಯದ ಹೆಮ್ಮೆಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವ ಕೆ ಎಚ್ ಮುನಿಯಪ್ಪ ಸೇರಿದಂತೆ ಪಕ್ಷದ ಎಲ್ಲಾ ಪ್ರಮುಖರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖವಾಗಿ ನನಗೆ ಸದಾ ಬೆಂಬಲವಾಗಿದ್ದ ನನ್ನ ರಾಜಕೀಯ ಗುರುಗಳಾದ ದಿವಂಗತ ವೆಂಕಟಸ್ವಾಮಿ, ತಾಲ್ಲೂಕಿನ ಮಾಜಿ ಶಾಸಕ ಟಿ ವೆಂಕಟರಮಣಯ್ಯ, ಶಾಸಕ ಶರತ್ ಬಚ್ಚೇಗೌಡ, ಮಾರ್ಗದರ್ಶಕ ಜಿ ಸಿ ಚಂದ್ರಶೇಖರ್, ನಟರಾಜ್ ಗೌಡ , ಶ್ರೀನಿವಾಸ್, ಸಿ ಆರ್ ಗೌಡ, ರಾಮೋಜಿ ಗೌಡ, ಪುಟ್ಟಣ್ಣ, ಎಸ್ ರವಿ, ರಕ್ಷಾರಾಮಯ್ಯ, ಎಸ್ ಆರ್ ಮುನಿರಾಜು, ಅರವಿಂದ ನರಸಿಂಹಸ್ವಾಮಿ, ಮುನಿಕೃಷ್ಣಪ್ಪ, ಜಯಕಾಂತಮ್ಮ, ರೇವತಿ ಅನಂತರಾಮ್, ರವಿ ಸಿದ್ದಪ್ಪ, ಎಚ್ ಎನ್ ನರಸಿಂಹಮೂರ್ತಿ, ಅಶ್ವಥಪ್ಪ, ಆದಿನಾರಾಯಣ ಸೇರಿದಂತೆ ತೂಬಗೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಎಲ್ಲ ಮುಖಂಡರಿಗೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.

 

 

Share This Article
error: Content is protected !!
";