ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಾ.ಟಿ.ಎಂ ಮಂಜುನಾಥ್ ಇವರು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿ ಸರ್ಕಾರ ನೇಮಕ ಮಾಡಿದ್ದು ಅವರನ್ನು ರಾಜ್ಯ ಕುಂಚಿಟಿಗ ಅಧಿಕಾರಿಗಳ ಸಂಘದಿಂದ ಅಭಿನಂದಿಸಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಗ್ರಾಮದ ಕುಂಚಿಟಿಗ ಸಮಾಜಕ್ಕೆ ಸೇರಿದವರಾಗಿರುತ್ತಾರೆ. ಈ ಮುಂಚೆ ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕರಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿರುತ್ತಾರೆ. ಇದಲ್ಲದೆ ಬೆಂಗಳೂರು ವಿವಿಗಳ ಅಧ್ಯಾಪಕ ವೃಂದದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕುಂಚಿಟಿಗ ಸಮಾಜವನ್ನು ಸರ್ಕಾರ ಗುರುತಿಸಿ ಕುಲಪತಿಗಳ ಹುದ್ದೆ ನೀಡಿರುವ ರಾಜ್ಯ ಸರ್ಕಾರಕ್ಕೂ ಸಮಾಜದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಡಾ.ಟಿ.ಎಂ ಮಂಜುನಾಥ್ ಇವರು ಸನ್ಮಾನ ಸ್ವೀಕರಿಸಿ ಮಾತನಾಡಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಮಹಾರಾಣಿ ಕ್ಲಸ್ಟರ್ ವಿಶ್ವ ವಿದ್ಯಾಲಯ ಆರಂಭಿಸಿ ನನ್ನನ್ನು ಕುಲಪತಿಗಳನ್ನಾಗಿ ನೇಮಕ ಮಾಡಿದೆ ಎಂದು ತಿಳಿಸಿದರು.
ಕುಂಚಿಟಿಗ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್.ಕೆ ಲಕ್ಷ್ಮಣ್, ಸರ್ಕಾರಿ ಬೆಂಗಳೂರು ಪಶು ವೈದ್ಯಕೀಯ ಕಾಲೇಜಿನ ವಿಶ್ರಾಂತ ಡೀನ್ ಡಾ.ಎಂ.ಜಿ ಗೋವಿಂದಯ್ಯ, ಬಿಬಿಎಂಪಿ ಡೆಪ್ಯೂಟಿ ಕಮಿಷನರ್ ಬೇತೂರು ಪಾಳ್ಯ ಜೆ.ರಾಜು, ಹಾಲ್ ಆಮೀನ್ ಕಾಲೇಜಿನ ನಿರ್ದೇಶಕರಾದ ಪ್ರೊ.ರಮೇಶ್, ನಿವೃತ್ತ ಡಿವೈಎಸ್ಪಿ ರಾಮಾಂಜಿನಪ್ಪ, ಕುಂಚಿಟಿಗ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಇದ್ದರು.