ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಾಡಿನ ಹೆಸರಾಂತ ಸಾಹಿತಿ ಚಿತ್ರದುರ್ಗದ ಡಾ.ಬಿ.ಎಲ್.ವೇಣುರವರ ದುರ್ಗದ ಬೇಡರ್ದಂಗೆ ಐತಿಹಾಸಿಕ ಕಾದಂಬರಿಯನ್ನು ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯವು ಎಂ.ಎ.ಪದವಿ ವಿದ್ಯಾರ್ಥಿಗಳಿಗೆ ಪಠ್ಯವನ್ನಾಗಿ ಆಯ್ಕೆ ಮಾಡಿದೆ.
ನಾಳೆಗಳಿಲ್ಲದವರು, ಸುಡುಗಾಡು ಸಿದ್ದನ ಪ್ರಸಂಗ ಸಣ್ಣ ಕಥೆಗಳನ್ನು ಶಿವಮೊಗ್ಗದ ಶಂಕರಘಟ್ಟ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯವು ಈಗಾಗಲೆ ಪದವಿ ವಿದ್ಯಾರ್ಥಿಗಳಿಗೆ ಪಠ್ಯವನ್ನಾಗಿ ಆಯ್ಕೆ ಮಾಡಿದ್ದು,
ಇದೀಗ ದುರ್ಗದ ಬೇಡರ್ದಂಗೆ ಐತಿಹಾಸಿಕ ಕಾದಂಬರಿಯನ್ನು ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯವನ್ನಾಗಿ ಆಯ್ಕೆ ಮಾಡಿ ಡಾ.ಬಿ.ಎಲ್.ವೇಣುರವರ ಕೀರ್ತಿಯನ್ನು ಇಮ್ಮಡಿಗೊಳಿಸಿದೆ.

