ರೈತ ಸಂಘಟಿತರಾದರೆ ಮಾತ್ರ ಅಸ್ಮಿತೆ ಉಳಿಯಲು ಸಾಧ್ಯ-ಡಾ. ಯೋಗೇಂದ್ರ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರೈತ ತಮ್ಮ ಅಸ್ಮಿತೆ ಉಳಿಯ ಬೇಕಾದರೆ ಸಂಘಟಿತರಾದರೆ ಮಾತ್ರ ಸಾಧ್ಯ ಎಂದು ಡಾ. ಯೋಗೇಂದ್ರ ಹೇಳಿದರು.
 

ನಗರದ ಹೊರವಲಯದ ರಾಜಘಟ್ಟ ಆಂಜನೇಯ ಸ್ವಾಮಿ ದೇವಾಲಯದ ಕಲ್ಯಾಣ ಮಂಟಪದಲ್ಲಿ ಭಾರತೀಯ ಕಿಸಾನ್ ಸಂಘ ಹಮ್ಮಿಕೊಂಡಿದ್ದ ಅಭ್ಯಾಸ ವರ್ಗ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು ದೇಶದಲ್ಲಿ ರೈತರು ಸ್ತಬ್ದವಾದರೆ ದೇಶದಲ್ಲಿ ಆಹಾರದ ಕೊರತೆ ಉಂಟಾಗಬಹುದು.

- Advertisement - 

ಅದರೆ ಕಠಿಣ ಪರಿಶ್ರಮ ದಿಂದಲೇ ದೇಶದ ಪ್ರತಿಯೊಬ್ಬರಿಗೂ ಆಹಾರ ಸಿಗುತ್ತದೆ. ಭಾರತದ ಸುಮಾರು ಮೂರನೇ ಎರಡು ಭಾಗದಷ್ಟು ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ರೈತರು ಆಹಾರ, ಮೇವು ಮತ್ತು ಇತರ ಕಚ್ಚಾ ವಸ್ತುಗಳನ್ನು ಉತ್ಪಾದಿಸುತ್ತಾರೆ. ಅವರು ತಮ್ಮ ಜೀವನದುದ್ದಕ್ಕೂ ದುಡಿಯುತ್ತಾರೆ, ಆದ್ದರಿಂದ ಅವರ ಕಠಿಣ ಶ್ರಮಕ್ಕೆ  ನಾವು ಗೌರವ ನಮನ ಸಲ್ಲಿಸಿ ಬೇಕಾಗುತ್ತೆ.

ಅದರಿಂದ ಭಾರತೀಯ ಕಿಸಾನ್ ಸಂಘದಿಂದ ಸರ್ಕಾರ ವಿರುದ್ದ    ಹೋರಾಟ ಮಾಡುವ ಮೂಲಕ  ರೈತರಿಗೆ ವಿವಿದ ಯೋಜನೆಗಳನ್ನು ಜಾರಿ ಮಾಡುವ ಮೂಲಕ  ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆದಾಯ ಬೆಂಬಲ ನೀಡಲು ಯೋಜನೆ  ಹಾಗು ಅರ್ಹ ರೈತರಿಗೆ ವರ್ಷಕ್ಕೆ 6,000 ಅನ್ನು ಮೂರು 2,000 ಕಂತುಗಳಲ್ಲಿ  ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ (DBT) ಮೂಲಕ ವರ್ಗಾಯಿಸಲಾಗುತ್ತದೆ. 

- Advertisement - 

ಅರ್ಹತೆ  ಕೃಷಿ ಭೂಮಿ ಹೊಂದಿರುವ ಭಾರತೀಯ ಪ್ರಜೆಗಳು ಇದರ ಅರ್ಹರಾಗಿದ್ದಾರೆ, ಆದರೆ ಆದಾಯ ತೆರಿಗೆ ಪಾವತಿಸು ವವರು ಮತ್ತು ಇತರ ಸರ್ಕಾರಿ ಉದ್ಯೋಗದಲ್ಲಿ ಇರುವವರನ್ನು ಹೊರತು ಪಡಿಸಲಾಗಿದೆ ಎಂದು ಹೇಳಿದರು.

ನಂತರ ಭಾರತೀಯ ಕಿಸಾನ್ ಸಂಘ ದಕ್ಷಿಣ ಪ್ರಾಂತದ ಪ್ರಮುಖ ನಾರಾಯಣ ಮಾತನಾಡಿ ಗ್ರಾಮದಲ್ಲಿ ರೈತರ ಪ್ರಮುಖ ಸಮಸ್ಯೆಗಳು ಕೃಷಿ ಉತ್ಪಾದನೆ, ಮಾರುಕಟ್ಟೆ ಪ್ರವೇಶ, ಸಾಲ, ಭೂ ಒಡೆತನ, ಮತ್ತು ಕೃಷಿ-ಸಂಬಂಧಿತ ಬೆಂಬಲದ ಕೊರತೆಯನ್ನು ಒಳಗೊಂಡಿವೆ. ಇದಕ್ಕೆ ಕಾರಣಗಳು ಸಣ್ಣ ಮತ್ತು ವಿಘಟಿತವಾದ ಜಮೀನು, ಅಸಮರ್ಪಕ ನೀರಾವರಿ ಮತ್ತು ಮಾರುಕಟ್ಟೆ ಮೂಲಸೌಕರ್ಯ, ಹವಾಮಾನ ವೈಪರೀತ್ಯ, ಕೃಷಿ-ಇನ್‌ಪುಟ್‌ಗಳ (ಬೀಜ, ರಸಗೊಬ್ಬರ) ಬೆಲೆ ಏರಿಕೆ, ಮತ್ತು ಸಾಲದ ಹೊರೆ, ಇವುಗಳಿಂದ ರೈತರು ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಒತ್ತಡದಿಂದ ಕಂಗೆಟ್ಟು ರೈತರು  ನಗರ ಪಟ್ಟಣಕ್ಕೆ ವಲಸೆ ಹೋಗುತ್ತಿರುವುದನ್ನು ತಪ್ಪಿಸಲು  ಗ್ರಾಮ ಸಮಿತಿ ರಚನೆ ಮಾಡುವುದರಿಂದ ಓಕ್ಕಲೆದ್ದ  ರೈತರನ್ನು ವಲಸೆ ತಪ್ಪಿಸಿ ಎಂದು ಕರೆ ಕೊಟ್ಟರು.

ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ನಾಗರಾಜಯ್ಯ ಮಾತನಾಡಿದರು.
ಜಿಲ್ಲಾ ಕೋಶಾಧ್ಯಕ್ಷ ಚೆನ್ನಿಗರಾಯಪ್ಪ ಕಾರ್ಯದರ್ಶಿ ಅಂಬಿಕಾ, ತಾಲ್ಲೂಕು ಉಪಾಧ್ಯಕ್ಷ ಗೋವಿಂದ ರಾಜು, ಹರಿ ಕುಮಾರ, ಮಹಿಳಾ ಪ್ರಮುಖ್ ಗೀತಾ,  ಲಕ್ಮೀ, ರಾಧಾ, ಜ್ಯೋತಿ, ಕಾರ್ಯದರ್ಶಿ ರಾಜಘಟ್ಟ ಗಣೇಶ, ಡಾ.ಕುಮಾರ್ ನಾಯಕ್, ಮುನೀಂದ್ರ ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ದೇಶದಲ್ಲಿ 70 ರಷ್ಟು ಕೃಷಿ ಅವಲಂಬಿತವಾಗಿದ್ದು ಖಾಸಗಿ ಭೂಮಾಲೀಕರು ಮತ್ತು ಬ್ಯಾಂಕುಗಳಿಂದ ಪಡೆದ ಸಾಲಗಳನ್ನು ಮರುಪಾವತಿಸಲು ಅಸಮರ್ಥರಾಗಿದ್ದಾರೆ.

ರೈತರು ಆತ್ಮಹತ್ಯೆಯಿಂದ ಸಾಯುತ್ತಿರುವ ಘಟನೆಯನ್ನು ಉಲ್ಲೇಖಿಸುತ್ತವೆ, ದೇಶದಲ್ಲಿನ ಸಬ್ಸಿಡಿಗಳಲ್ಲಿನ ಭ್ರಷ್ಟಾಚಾರ, ಬೆಳೆ ವೈಫಲ್ಯ, ಮಾನಸಿಕ ಆರೋಗ್ಯ, ವೈಯಕ್ತಿಕ ಸಮಸ್ಯೆಗಳು ಮತ್ತು ಕೌಟುಂಬಿಕ ಸಮಸ್ಯೆಗಳಂತಹ ರೈತರ ಆತ್ಮ ಹತ್ಯೆಗಳಿಗೆ ಕಾರಣವಾಗಿದೆ.
ನೆಲ್ಲುಗುದಿಗೆ ಚಂದ್ರು, ಅಧ್ಯಕ್ಷರು, ಭಾರತೀಯ ಕಿಸಾನ್ ಸಂಘ, ದೊಡ್ಡಬಳ್ಳಾಪುರ ತಾಲೂಕು.

Share This Article
error: Content is protected !!
";