ಡ್ರಾಮಾರಾಮಯ್ಯನ ಜಾತಿ ಗಣತಿ!!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಡಾ ಹಗರಣದಲ್ಲಿ ಮೆತ್ತಿಕೊಂಡಿರುವ ಮಸಿ ಅಳಿಸಿ ಹಾಕಲು ಮುಡಾರಾಮಯ್ಯ ಜಾತಿಗಣತಿ ವೈಟ್ನರ್ ಅನ್ನು ಮುನ್ನಲೆಗೆ ತಂದಿದ್ದಾರೆ.  

 ಮುಡಾ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿಗಳೇ A1 ಆರೋಪಿ, ಭ್ರಷ್ಟಾಚಾರದ ಕಳಂಕ ಹೊತ್ತಿರುವ ಸಿದ್ದರಾಮಯ್ಯ ಸಿಎಂ ಕುರ್ಚಿಗೆ ಅಂಟಿಕೊಂಡಿದ್ದು, ಜನರನ್ನು ದಾರಿ ತಪ್ಪಿಸಲು ಜಾತಿಗಣತಿ ನಾಟಕ ಶುರು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ದ ಜೆಡಿಎಸ್ ಕಿಡಿಕಾರಿದೆ.

ಆದರೆ, ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲೇ ಜಾತಿಗಣತಿ ವರದಿಯನ್ನು ಯಾವುದೇ ಕಾರಣಕ್ಕೂ ಬಹಿರಂಗ ಮಾಡಬಾರದು ಎಂಬ ಕೂಗು ಎದ್ದಿದೆ.

ರಾಜ್ಯದ ಅಭಿವೃದ್ಧಿ ಮರೆತು, ಜನಪರ ಆಡಳಿತ ನೀಡಲು ವಿಫಲವಾಗಿರುವ ಭ್ರಷ್ಟ ಕಾಂಗ್ರೆಸ್‌ಸರ್ಕಾರ ಜಾತಿಗಣತಿ ವಿಷಯದಲ್ಲಿ ಜನರಿಗೆ ಮಂಕುಬೂದಿ ಎರಚುತ್ತಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

ಸಿಎಂ ರೇಸ್‌ನಲ್ಲಿ ಕಾಂಗ್ರೆಸ್‌ನಾಯಕರಲ್ಲೇ ಜಟಾಪಟಿ ಜೋರಾಗಿದ್ದು, ಕಾಂಗ್ರೆಸ್ ಮನೆಯೊಂದು ಮೂವತ್ತಾರು ಬಾಗಿಲು ಆಗಿದೆ.  ಅವೈಜ್ಞಾನಿಕ ಜಾತಿಗಣತಿ ಮುನ್ನಲೆಗೆ ತಂದು ಭ್ರಷ್ಟಾಚಾರಗಳಿಂದ ರಕ್ಷಣೆ ಪಡೆಯಲು ಹೊರಟಿರುವ ಅವಕಾಶವಾದಿಗೆ ಜನರೇ ತಕ್ಕಪಾಠ ಕಲಿಸುವುದು ನಿಶ್ಚಿತ ಎಂದು ಜೆಡಿಎಸ್ ಭವಿಷ್ಯ ನುಡಿದಿದೆ.

 

- Advertisement -  - Advertisement -  - Advertisement - 
Share This Article
error: Content is protected !!
";