ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರು ಸರಬರಾಜು ಆಗುವ ಶಾಂತಿಸಾಗರ ಮುಖ್ಯ ಕೊಳವೆ ಮಾರ್ಗದ ಸೋಮಲಾಪುರ ಗ್ರಾಮ, ಕೊಟ್ಟಿಗೆಹಳ್ಳಿ ಪಂಪ್ ಹೌಸ್ ಮತ್ತು ಬಿ.ದುರ್ಗ ಹತ್ತಿರ ಲಿಕೇಜ್ ಉಂಟಾಗಿದೆ.
ಸದರಿ ಕೊಳವೆ ಮಾರ್ಗದ ದುರಸ್ಥಿ ಕಾರ್ಯದ ಹಿನ್ನಲೆಯಲ್ಲಿ ಡಿ.25 ರಿಂದ 28 ರವರೆಗೆ 3 ದಿನಗಳ ಕಾಲ ನಗರದ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಸದರಿ ದಿನಗಳಂದು ಸಾರ್ವಜನಿಕರು ಕೊಳವೆ ಬಾವಿಗಳು ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನು ಉಪಯೋಗಿಸುವಂತೆ ನಗರಸಭೆ ಪ್ರಕಟಣೆ ತಿಳಿಸಿದೆ.

