ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕ–ಕಂ–ನಿರ್ವಾಹಕ ಹುದ್ದೆಯ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಬೆಂಗಳೂರಿನ ಶಾಂತಿ ನಗರದ ನಿಗಮದ ಕೇಂದ್ರ ಕಛೇರಿಯ ಸೂಚನಾ ಫಲಕದಲ್ಲಿ ಮತ್ತು ನಿಗಮದ ವೆಬ್‍ಸೈಟ್ ksrtcjobs.karnataka.gov.in ನಲ್ಲಿ ಪ್ರಕಟಿಸಲಾಗಿದೆ.
ಸಂಭವನೀಯ ಆಯ್ಕೆ ಪಟ್ಟಿಯಲ್ಲಿ ಆಯಾ ಪ್ರವರ್ಗದಲ್ಲಿ ಸ್ಥಾನ ಪಡೆದ ಕೊನೆಯ ಅಭ್ಯರ್ಥಿ ಪಡೆದ ಅಂಕಗಳು ಹಾಗೂ ಹುಟ್ಟಿದ ದಿನಾಂಕದ ವಿವರ ಒದಗಿಸಲಾಗಿದೆ.
ಸಂಭವನೀಯ ಆಯ್ಕೆಪಟ್ಟಿಗೆ ಏನಾದರೂ ಆಕ್ಷೇಪಣೆ ಇದ್ದಲ್ಲಿ 2025ರ ಜೂನ್ 11 ರಂದು ಸಂಜೆ 5.30 ರ ಒಳಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ, ಕೇಂದ್ರ ಕಛೇರಿ, ನೇಮಕಾತಿ ಶಾಖೆ, ಶಾಂತಿನಗರ, ಬೆಂಗಳೂರು ಇಲ್ಲಿಗೆ ಖುದ್ದಾಗಿ ಅಥವಾ ನಿಗಮದ ಅಧಿಕೃತ ಇ–ಮೇಲ್ dycpmrct@ksrtc.org ಮುಖಾಂತರ ಸಲ್ಲಿಸಬೇಕು. ಜೂನ್ 11 ರ ನಂತರ ಸ್ವೀಕರಿಸಲಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
ಸದರಿ ನೇಮಕಾತಿಯು ಪಾರದರ್ಶಕವಾಗಿದ್ದು ಯಾವುದೇ ಆಮಿಷ / ಅವ್ಯವಹಾರದಲ್ಲಿ ಅಭ್ಯರ್ಥಿಗಳು ತೊಡಗಬಾರದು ಎಂದು ಆಯ್ಕೆ ಸಮಿತಿ ಅಧ್ಯಕ್ಷರು ಹಾಗೂ ಸಿ & ಜಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.