ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲನಾ ವೃತ್ತಿ ಪರೀಕ್ಷೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ  ಮೂಲ ದಾಖಲೆ / ದೈಹಿಕ ಅರ್ಹತೆ ಪರಿಶೀಲನೆಯಲ್ಲಿ ಅರ್ಹರಾದ ಅಭ್ಯರ್ಥಿಗಳಲ್ಲಿ ಪ್ರಥಮ ಹಂತವಾಗಿ ಚಾಲಕ-ಕಂ- ನಿರ್ವಾಹಕ (ಪಜಾ-ಹಿಂಬಾಕಿ) ಹಾಗೂ

ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ (Both) ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ಚಾಲನಾ ವೃತ್ತಿ ಪರೀಕ್ಷೆಯನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಮನಾಬಾದ್ ಪ್ರಾದೇಶಿಕ ತರಬೇತಿ ಕೇಂದ್ರ ಬೀದರ್ ಜಿಲ್ಲೆಯ ಚಾಲನಾ ಪಥÀದಲ್ಲಿ ಡಿಸೆಂಬರ್ 14 ರಿಂದ ಪ್ರಾರಂಭಿಸಲಾಗುವುದು.

- Advertisement - 

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮಾತ್ರ ಸಂಸ್ಥೆಯ ವೆಬ್‍ಸೈಟ್ ವಿಳಾಸ www.nwkrtc.karnataka.gov.in ನಲ್ಲಿ ತಮ್ಮ ಅರ್ಜಿ ಸಂಖ್ಯೆ / ಜನ್ಮ ದಿನಾಂಕವನ್ನು ನಮೂದಿಸಿ ಕರೆ ಪತ್ರವನ್ನು ಮುದ್ರಿಸಿಕೊಂಡು ನಿಗದಿತ ಸ್ಥಳ / ದಿನಾಂಕ / ಸಮಯಕ್ಕೆ ಸರಿಯಾಗಿ ಹಾಜರಾಗುವುದು. ಚಾಲಕ ಹುದ್ದೆಯ ವೃತ್ತಿ ಪರೀಕ್ಷೆಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

- Advertisement - 

 

Share This Article
error: Content is protected !!
";