ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆಗೆ ಚಾಲನೆ

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಬೆಂಗಳೂರಿನ ಉದ್ಯಮಿ ಆರ್ ಚಂದ್ರು ಅವರು, ಶಿವಮೊಗ್ಗ ತಾಲೂಕಿನ ಕುಂಸಿ ಸುತ್ತಮುತ್ತಲಿನ ಗ್ರಾಮಗಳ 3000 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ ಕಾರ್ಯಕ್ಕೆ ಗುರುವಾರ ಚಾಲನೆ ನೀಡಿದ್ದಾರೆ.

- Advertisement - 

ಕುಂಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಆರ್ ಚಂದ್ರು ಅವರ ಸಹೋದರ ಹುಲಿಗೆಪ್ಪ ಅವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ ಕಾರ್ಯಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

- Advertisement - 

ನಂತರ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿ, ಕಳೆದ 19 ವರ್ಷಗಳಿಂದ ತಮ್ಮ ಸಹೋದರ ಆರ್ ಚಂದ್ರು ಅವರು ಕುಂಸಿ ಸುತ್ತಮುತ್ತಲಿನ ಸಾವಿರಾರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ ಮಾಡುತ್ತಿದ್ದಾರೆ. ಪ್ರಸ್ತುತ ವರ್ಷ 3000 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ ನಗರದ ಮಥುರ ಸೆಂಟ್ರಲ್ ಹೋಟೆಲ್ ಮಾಲಿಕರು ಹಾಗೂ ಆರ್ ಚಂದ್ರು ಅವರ ಬಾಲ್ಯ ಸ್ನೇಹಿತ ಆರ್ ರಾಜೇಂದ್ರ ಅವರು ಮಾತನಾಡಿ, ಆರ್ ಚಂದ್ರು ಅವರು ಅತ್ಯಂತ ಕಡುಬಡತನದಲ್ಲಿ ಬೆಳೆದ ವ್ಯಕ್ತಿಯಾಗಿದ್ದಾರೆ. ಬಡತನದ ಕಾರಣದಿಂದ ಸಮರ್ಪಕವಾಗಿ ವಿದ್ಯಾಭ್ಯಾಸ ನಡೆಸಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಜೀವನದಲ್ಲಿ ಅತ್ಯಂತ ಕಷ್ಟಪಟ್ಟು ಪ್ರಸ್ತುತ ಉನ್ನತ ಸ್ಥಾನದಲ್ಲಿದ್ದಾರೆ.

- Advertisement - 

ತಾವು ಅನುಭವಿಸಿದ ಸಂಕಷ್ಟ ಇತರೆ ವಿದ್ಯಾರ್ಥಿಗಳಿಗೆ ಬರೆದಿರಲಿ ಎಂಬ ಸದುದ್ದೇಶದಿಂದ, ಕಳೆದ ಹಲವು ವರ್ಷಗಳಿಂದ ತಾವು ಹುಟ್ಟಿ ಬೆಳೆದ ಕುಂಸಿ ಹಾಗೂ ಸುತ್ತಮುತ್ತಲಿನ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣೆ ಮಾಡುವ ಮಹತ್ತರ ಕಾರ್ಯ ನಡೆಸಿಕೊಂಡು ಬರುತ್ತಿದ್ದಾರೆ. ಇದು ನಿಜಕ್ಕೂ ಅಭಿನಂದನೆಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮಾರಂಭದಲ್ಲಿ ಕುಂಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಂಜನೇಯ, ಉಪಾಧ್ಯಕ್ಷೆ ಶಾರದಾ ರಂಗನಾಥ್, ಪ್ರಮುಖರಾದ ಧರ್ಮೇಂದ್ರ, ವೀರಪ್ಪ ಕರಡಿ, ಸಿದ್ದಪ್ಪ, ನಾಗೇಶ್, ಪ್ರದೀಪ್ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಉಪಸ್ಥಿತರಿದ್ದರು.

Share This Article
error: Content is protected !!
";