ಅರಣ್ಯ ಬೆಂಕಿ ತಡೆಗೆ ಡ್ರೋನ್ ಕಣ್ಗಾವಲು

News Desk

ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಕಿಡಿಗೇಡಿಗಳು ಅರಣ್ಯ ಪ್ರದೇಶಕ್ಕೆ ಬೆಂಕಿ ಇಟ್ಟಿದ್ದು ಇದರಿಂದ ನೂರಾರು ಎಕರೆ ಅರಣ್ಯ ಭಸ್ಮವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಚಂದ್ರ ದ್ರೋಣ ಪರ್ವತದಲ್ಲಿ ಸಂಭವಿಸಿದೆ.

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿ ಗಾಳಿಕೆರೆ ಭಾಗದ 6 ಕಡೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಕಿಡಿಗೇಡಿಗಳು ಇಟ್ಟ ಬೆಂಕಿಗೆ ಇಡೀ ಗುಡ್ಡವೇ ಉರಿದು ಭಸ್ಮವಾಗಿದೆ.

ಅರಣ್ಯ ಇಲಾಖೆ ಕಿಡಿಗೇಡಿಗಳ ಕೃತ್ಯ ತಡೆಯಲು ಡ್ರೋನ್ ಮೊರೆ ಹೋಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಡ್ರೋನ್ ಮೂಲಕ ಅರಣ್ಯ ಇಲಾಖೆ ಕಣ್ಣಿಟ್ಟಿದೆ. ಕಳೆದ ಒಂದು ವಾದದಿಂದ ನಿರಂತರವಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಎಫ್​​ಐಆರ್ ದಾಖಲಾದರೂ ಕಿಡಿಗೇಡಿಗಳ ಕೃತ್ಯ ಮುಂದುವರೆದಿರುವುದು ಆತಂಕಕ್ಕೆ ಕಾರಣವಾಗಿದೆ.

 

Share This Article
error: Content is protected !!
";