ಗಾಯಕಿ ಮಂಗ್ಲಿ ಹುಟ್ಟು ಹಬ್ಬದಲ್ಲಿ ಡ್ರಗ್ಸ್ ಸೇವನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಖ್ಯಾತ ತೆಲುಗು ಗಾಯಕಿ ಮಂಗ್ಲಿಯ ಹುಟ್ಟುಹಬ್ಬಕ್ಕಾಗಿ ಆಯೋಜಿಸಲಾಗಿದ್ದ ಡಿನ್ನರ್ ಪಾರ್ಟಿಯ ಮೇಲೆ ಪೊಲೀಸರು ತಡರಾತ್ರಿ ದಾಳಿ ಮಾಡಿದ್ದು ಪಾರ್ಟಿಯಲ್ಲಿ ಮಾದಕ ವಸ್ತುಗಳ ಸೇವನೆ ಪತ್ತೆಯಾಗಿದೆ.

- Advertisement - 

ಹೈದರಾಬಾದ್​ನ ಚೆವೆಲ್ಲಾ ತ್ರಿಪುರಾ ರೆಸಾರ್ಟ್‌ನಲ್ಲಿ ಗಾಯಕಿ ಮಂಗ್ಲಿಯ ಬರ್ತ್​ಡೇ ಪಾರ್ಟಿ ನಡೆದಿತ್ತು. ಪಾರ್ಟಿಯ ಮೇಲೆ ದಾಳಿ ನಡೆಸಿದ ಪೊಲೀಸರು ಪಾರ್ಟಿಯಲ್ಲಿ ಭಾಗಿಯಾದವರ ರಕ್ತದ ಮಾದರಿಗಳನ್ನು ಪಡೆದು, ಪರೀಕ್ಷೆ ನಡೆಸಿದ್ದು, ಮಾದಕ ವಸ್ತು ಸೇವಿಸಿರುವುದು ಖಾತ್ರಿ ಆಗಿದೆ.

- Advertisement - 

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡು ಹಾಡಿರುವ ಗಾಯಕಿ ಮಂಗ್ಲಿ ಹುಟ್ಟು ಹಬ್ಬದ ಪಾರ್ಟಿಯ ಮೇಲೆ ಹೈದರಾಬಾದ್ ಪೊಲೀಸರ ಮಾದಕ ವಸ್ತು ನಿಗ್ರಹ ದಳದ ಸದಸ್ಯರು ದಾಳಿ ನಡೆಸಿ ಪಾರ್ಟಿಯಲ್ಲಿ ಹಾಜರಿದ್ದವರ ರಕ್ತದ ಮಾದರಿ ತೆಗೆದುಕೊಂಡು ಪರೀಕ್ಷೆಗೆ ಒಳಪಡಿಸಿದಾಗ ಆ ಪೈಕಿ ಒಂಬತ್ತು ಮಂದಿ ಗಾಂಜಾದಂತಹ ಮಾದಕ ವಸ್ತು ಸೇವಿಸಿರುವುದು ಖಾತ್ರಿ ಆಗಿದೆ.

ಮಂಗ್ಲಿಯ ಹುಟ್ಟುಹಬ್ಬದಲ್ಲಿ ಹಲವಾರು ಮಂದಿ ಭಾಗಿಯಾಗಿದ್ದು, ಕೆಲ ವಿದೇಶಿ ಮದ್ಯಗಳು ಸಹ ಪಾರ್ಟಿ ಸ್ಥಳದಲ್ಲಿದ್ದು ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

- Advertisement - 

ಬರ್ತ್​ಡೇ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಗಾಯಕಿ ಮಂಗ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎನ್ನಲಾಗುತ್ತಿದೆ. ಘಟನಾ ಸ್ಥಳದ ವಿಡಿಯೋ ಮಾಡುತ್ತಿದ್ದ ಪೊಲೀಸರ ಮೇಲೆ ವಾಗ್ದಾಳಿ ನಡೆಸಿದ ಗಾಯಕಿ ಮಂಗ್ಲಿ, ವಿಡಿಯೋ ರೆಕಾರ್ಡಿಂಗ್ ನಿಲ್ಲಿಸುವಂತೆ ಧಮ್ಕಿ ಹಾಕಿದ್ದಾರೆ ಎನ್ನಲಾಗುತ್ತಿದೆ. ಮಂಗ್ಲಿ ಮಾದಕ ವಸ್ತು ಪ್ರಕರಣದ ಆರೋಪಿಯಾಗಿದ್ದಾರೆ ಎನ್ನಲಾಗಿದೆ.

Share This Article
error: Content is protected !!
";