ಒಣ ತ್ಯಾಜ್ಯ ನಿರ್ವಹಣೆ ಘಟಕ ಪರಿಶೀಲಿಸಿದ ಡಿಸಿಎಂ

News Desk
- Advertisement -  - Advertisement - 

ಒಣ ತ್ಯಾಜ್ಯ ನಿರ್ವಹಣೆ ಘಟಕ ಪರಿಶೀಲಿಸಿದ ಡಿಸಿಎಂ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದ ನಾಗರಿಕರಿಗೆ ಸ್ಪಂದಿಸಲು ಬೆಂಗಳೂರು ನಡಿಗೆಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಒಣ ತ್ಯಾಜ್ಯ ನಿರ್ವಹಣೆಯ ಘಟಕಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಶಾಸಕರು, ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಹಾಗೂ ಅಧಿಕಾರಿಗಳು ಒಣ ತ್ಯಾಜ್ಯ ನಿರ್ವಹಣೆಯ ಘಟಕದ ಕಾರ್ಯವೈಖರಿ ಕುರಿತು ಮಾಹಿತಿ ನೀಡಿದರು.

- Advertisement - 

ಕಸ ನಿರ್ವಹಣೆ ಎಂಬುದು ಬೆಂಗಳೂರಿನ ಅತಿದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಹೀಗಾಗಿ ಒಣ ತ್ಯಾಜ್ಯ ನಿರ್ವಹಣೆ ಅನಿವಾರ್ಯವಾಗಿದ್ದು, ಇದಕ್ಕೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ಒದಗಿಸಲು ಬದ್ಧವಾಗಿದೆ ಎಂದು ಡಿಕೆ ಶಿವಕುಮಾರ ತಿಳಿಸಿದರು.

- Advertisement - 
Share This Article
error: Content is protected !!
";