ದಲಿತ ಸಂಘರ್ಷ ಸಮಿತಿ ಹೆಸರು ಹೈಜಾಕ್ ವಿರುದ್ಧ ಡಿಎಸ್ಎಸ್ ಪ್ರತಿಭಟನೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೆಸರನ್ನು ಹೈಜಾಕ್ ಮಾಡಲಾಗಿದೆ
, ಸಂಘಟನೆಯ ಹೆಸರಿನಲ್ಲಿ ಅಧ್ಯಯನ ಶಿಬಿರವನ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಂಘಟನೆಯ ಕಾರ್ಯಕರ್ತರು ಶಿಬಿರ ನಡೆಯುತ್ತಿರುವ ಸ್ಥಳದಲ್ಲಿ  ಪ್ರತಿಭಟನೆ ನಡೆಸಿದ್ದಾರೆ, ಸಂಘಟನೆಯ ಬ್ಯಾನರ್ ತೆಗೆಯುವಂತೆ ಆಗ್ರಹಿಸಿದ್ದಾರೆ.

ಹೆಣ್ಣೂರು ಶ್ರೀನಿವಾಸ್ ರವರು ರಾಜ್ಯ ಮಟ್ಟದ ಮೂರು ದಿನಗಳ ಅಧ್ಯಯನ ಶಿಬಿರವನ್ನು ನಡೆಸುತ್ತಿದ್ದಾರೆ, ಅಧ್ಯಯನ ಶಿಬಿರವನ್ನ ಕರ್ನಾಟಕ ದಲಿತ ಸಂಘರ್ಘ ಸಮಿತಿಯ ಹೆಸರಿನಲ್ಲಿ ಮಾಡಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು  ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕ್ ನಲ್ಲಿ ಪ್ರತಿಭಟನೆಯನ್ನ ನಡೆಸಿದರು. 

ಇದೇ ವೇಳೆ ರಾಜ್ಯ ಸಂಘಟನಾ ಸಂಚಾಲಕರಾದ ನೆಲಮಂಗಲ ಬಸವರಾಜು ಮಾತನಾಡಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಎಂ.ಗುರುಮೂರ್ತಿಯವರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂಘಟಿಸುವ ಮೂಲಕ ಬಲಿಷ್ಠ ಸಂಘಟನೆಯನ್ನಾಗಿ ಮಾಡಿದ್ದಾರೆ, ಸಂಘಟನೆ ಹಕ್ಕುದಾರಿಕೆಗಾಗಿ 11 ವರ್ಷಗಳ ಹೋರಾಟವನ್ನು ಮಾಡಿದ್ದಾರೆ. ಶಿವಮೊಗ್ಗ ಸಿವಿಲ್ ಕೋರ್ಟ್ , ಭದ್ರಾವತಿ ಸಿವಿಲ್ ಕೋರ್ಟ್ ಮತ್ತು ಹೈಕೋರ್ಟ್ ನಲ್ಲಿ ಸಂಘಟನೆ ಗುರುಮೂರ್ತಿಯವರಿಗೆ ಸೇರಿದ್ದು ಎಂದು ತೀರ್ಪು ನೀಡಲಾಗಿದೆ ಎಂದರು. 

ತಾಲೂಕು ಅಧ್ಯಕ್ಷರಾದ ರಾಮಮೂರ್ತಿ ನೆರಳಘಟ್ಟ ಮಾತನಾಡಿ ಕೋರ್ಟ್ ತೀರ್ಪುಗಳು ನಮ್ಮ ಪರವಾಗಿದ್ದರೂ, ಹೆಣ್ಣೂರು ಶ್ರೀನಿವಾಸ್ ನಮ್ಮ ಸಂಘಟನೆ ಹೆಸರನ್ನು ಬಳಸಿಕೊಂಡು ಶಿಬಿರವನ್ನು ನಡೆಸುತ್ತಿದ್ದಾರೆ, ಸಂಘಟನೆ ಬ್ಯಾನರ್ ಬಳಸದಂತೆ ವಿನಂತಿಯನ್ನು ಮಾಡಿದ್ದೆವು.ಸಮಾಜದಲ್ಲಿ ಬಿರುಕು ಮೂಡಿಸಲು ಮತ್ತು ಸಂಘಟನೆಗೆ ಕೆಟ್ಟ ಹೆಸರು ತರಬೇಡಿ ಎಂದು ವಿನಂತಿ ಮಾಡಿದ್ದೆವು.ಆದರೆ ಹೆಣ್ಣೂರು ಶ್ರೀನಿವಾಸ್ ಉಡಾಫೆಯ ಮಾತುಗಳನ್ನಾಡಿದ್ದಾರೆ, ನಾವು ಕಾರ್ಯಕ್ರಮಕ್ಕೆ ತೊಂದರೆ ನೀಡುವುದಿಲ್ಲ, ನಮ್ಮ ಆಗ್ರಹ ನಮ್ಮ ಸಂಘಟನೆ ಬ್ಯಾನರ್ ಬಳಸ ಬೇಡಿ ಎನ್ನುವುದು, ಬ್ಯಾನರ್ ತೆಗೆಯುವರೆಗೂ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

- Advertisement -  - Advertisement - 
Share This Article
error: Content is protected !!
";